Job Description: * ಭಾರತದಲ್ಲಿ ಕೋರೋಣ ವೈರಸ್'ನ 2ನೇ ಅಲೇ ಹೆಚ್ಚುತ್ತಿರುವ ಹಿನ್ನಲೆಯಿಂದ ಕೋವಿಡ್-19 ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ, ಈ ಕೋವಿಡ್-19 ಲಸಿಕೆಗಳ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರವು ಲಸಿಕೆ ಉತ್ಪಾದನೆಯ ಕೇಂದ್ರಕ್ಕೆ 65 ಕೋಟಿ ರೂ ನೆರವು ಘೋಷಿಸಿದೆ. * ಕೇಂದ್ರ ಸರ್ಕಾರವು ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯ ಘಟಕಕ್ಕೆ ಉತ್ತೇಜನ ನೀಡಲು ಭಾರತ್ ಬಯೋಟೆಕ್ಗೆ 65 ಕೋಟಿ ರೂ. ನೆರವನ್ನು ಘೋಷಿಸಿದೆ ಎಂದು ತಿಳಿದು ಬಂದಿದೆ ಹಾಗೂ ಈ ಹಣದ ಸಹಾಯವನ್ನು ಬೆಂಗಳೂರಿನಲ್ಲಿರುವ ಭಾರತ್ ಬಯೋಟೆಕ್ನ ಘಟಕಕ್ಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. * ಕೋವ್ಯಾಕ್ಸಿನ್ ಲಸಿಕೆಯ ಈಗಿನ ಉತ್ಪಾದನಾ ಸಾಮರ್ಥ್ಯವನ್ನು ಮೇ-ಜೂನ್ ವೇಳೆಗೆ ಹೆಚ್ಚಗೆ ಮಾಡಲಾಗುತ್ತದೆ, ಹಾಗೂ ಮುಂದಿನ ದಿನಗಳಲ್ಲಿ ಅಂದರೆ ಜುಲೈ-ಆಗಸ್ಟ್ ತಿಂಗಳಿನ ಸಮಯಕ್ಕೆ 6-7 ಕೋಟಿ ಡೋಸ್ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಹಾಗೆಯೇ ಸೆಪ್ಟೆಂಬರ್ ಸಮಯಕ್ಕೆ ಅಂದರೆ ಪ್ರತಿ ತಿಂಗಳಿಗೆ 10 ಕೋಟಿ ಡೋಸ್ ತಯಾರಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.