Job Description: * ಪಾಕಿಸ್ತಾನದ ಇಸ್ಲಾಮಾಬಾದ್'ನ ತೆಹ್ರೀಕ್-ಇ-ಲಬೈಕ್ (TLB) ಪಕ್ಷವು ಪ್ರತಿಭಟನೆಯನ್ನು ನಡೆಸುತ್ತಿದೆ ಈ ಪ್ರತಿಭಟನೆಯು ತೀವ್ರಗೊಂಡ ಕಾರಣದಿಂದಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕವಾಗಿ ನಿಷೇಧ ಹೇರಿದೆ. * ಪಾಕಿಸ್ತಾನದ ಆಂತರಿಕಭದ್ರತಾ ಸಚಿವಾಲಯವು ದೂರಸಂಪರ್ಕ ಪ್ರಾಧಿಕಾರಕಕ್ಕೆ ಸಾಮಾಜಿಕ ಜಾಲತಾಣಗಳಾಗಿರು ಟ್ವಿಟರ್, ಫೇಸ್ಬುಕ್, ವಾಟ್ಸ್ಆಪ್, ಯೂಟ್ಯೂಬ್, ಟೆಲಿಗ್ರಾಮ್ ತಾಣಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಸೂಚಿಸಿದೆ. * ಪ್ರವಾದಿ ಪೈಂಗಬರನ್ ವ್ಯಂಗ್ಯ ಚಿತ್ರವನ್ನು ಫ್ರಾನ್ಸ್ನ ನಿಯತಕಾಲಿಕೆಯೊಂದು ಪ್ರಕಟಿಸಿರುವ ಕಾರಣದಿಂದಾಗಿ ಫ್ರಾನ್ಸ್ನ ರಾಯಭಾರಿಯನ್ನು ಏಪ್ರಿಲ್ 20ರೊಳಗೆ ಉಚ್ಚಾಟನೆ ಮಾಡುವಂತೆ TLB ಪಕ್ಷವು ಸೀಮಿತ ಗಡುವು ನೀಡಿದೆ. * ತೆಹ್ರೀಕ್-ಎ-ಲ್ಯಾಬ್ಬೈಕ್ ಪಾಕಿಸ್ತಾನದ ಬಲಪಂಥೀಯ ಇಸ್ಲಾಮಿಸ್ಟ್ ರಾಜಕೀಯ ಪಕ್ಷವಾಗಿದೆ, ಈ ಪಕ್ಷವನ್ನು ಖಾದಿಮ್ ಹುಸೇನ್ ರಿಜ್ವಿ ಅವರು ಸ್ಥಾಪಿಸಿದ್ದಾರೆ. * ತೆಹ್ರೀಕ್-ಇ-ಲ್ಯಾಬ್ಬೈಕ್ ಪಾಕಿಸ್ತಾನವನ್ನು 1997ರ ಭಯೋತ್ಪಾದನಾ ವಿರೋಧಿ ಕಾಯ್ದೆ ನಿಯಮ 11ರ ಅಡಿಯಲ್ಲಿ ಪಾಕಿಸ್ತಾನ ಸರ್ಕಾರವು 20 ಏಪ್ರಿಲ್ 2021 ರಂದು ನಿಷೇಧಿಸಿತು.