Job Description: * ಏಪ್ರಿಲ್ 13 ರಂದು ಪಂಜಾಬ್'ನ ಅಮೃತ್ ಸರದಲ್ಲಿರುವ ಜಲಿಯನ್ ವಾಲಾ ಬಾಗ್'ನ ಉದ್ಯಾನದಲ್ಲಿ ನಡೆದ ಹತ್ಯಾಕಾಂಡದ ಘಟನೆಯು ಇಂದಿಗೆ ಬರೋಬ್ಬರಿ 102 ವರ್ಷಗಳು ಸಂದಿವೆ. * ಸಿಖ್ಭರ ಯುಗಾದಿ ಬೈಸಾಕಿ ಹಬ್ಬದ ದಿನದಂದೇ ನಡೆದ ಈ ಘಟನೆಯು ದೇಶದ ಇತಿಹಾಸದಲ್ಲಿ ಇದು ಭೀಕರ ಮಾರಣಹೋಮ ಅಥವಾ ಹತ್ಯಾಕಾಂಡವಾದ ದಿನವಾಗಿದೆ. * ಏಪ್ರಿಲ್ 13ರ 1919ರಂದು ಇಡೀ ದೇಶ ಯುಗಾದಿ ಸಂಭ್ರಮದಲ್ಲಿರುವಾಗ ಪಂಜಾಬ್'ನ ಅಮೃತ್ ಸರದಲ್ಲಿ ನಡೆದ ಹತ್ಯಾಕಾಂಡ ಇದಾಗಿದೆ. * ಪಂಜಾಬ್'ನ ಸಿಖ್ಖರು ಬೈಸಾಕಿ ಹಬ್ಬದ ಸಂಭ್ರಮ ಆಚರಿಸಲು ಅಮೃತಸರದಲ್ಲಿನ ಜಲಿಯನ್ ವಾಲಾ ಬಾಗ್ ನಲ್ಲಿರುವ ಉದ್ಯಾನವನಕ್ಕೆ ಆಗಮಿಸಿದ ಸಂಧರ್ಭದಲ್ಲಿ ನಡೆದ ಘಟನೆ ಇದಾಗಿದೆ. * ಆಗಿನ ಬ್ರಿಟಿಷ್ ಸರ್ಕಾರ ನೀಡಿರುವ ಆಜ್ಞೆಯ ಪ್ರಕಾರ ಅಂದು ಅಮೃತಸರದಲ್ಲಿ 5 ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ ಎಂದು ತಿಳಿಸಿತ್ತು, ಆದರೂ ಪಂಜಾಬ್'ನ ಸಿಖ್ಖರು ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಿದ್ದರಿಂದ ಈ ಹತ್ಯಾಕಾಂಡ ನಡೆದಿದೆ ಎನ್ನಲಾಗಿದೆ. * ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್ ವಾಲಾ ಬಾಗ್ ಈಗ ಸಾರ್ವಜನಿಕ ಉದ್ಯಾನವನವಾಗಿದ್ದು ಭಕ್ತಿ ಪರವಶತೆಗೆ ಹೆಸರಾಗಿರುವ ಪಂಜಾಬಿನ ಅಮೃತಸರ ನಗರದಲ್ಲಿದೆ. * ರಾಷ್ಟೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿರುವ ಈ ಸ್ಮಾರಕ ಸ್ಥಳವನ್ನು ಪಂಜಾಬ್ ರಾಜ್ಯೋತ್ಸವದ ದಿನವಾದ 13 ಎಪ್ರಿಲ್, 1961ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು.