Job Description: * ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್.30 ರಿಂದ ನೂತನ ಮರಳು ನೀತಿ ಜಾರಿಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದರು. * ಇದೇ ಏಪ್ರಿಲ್. 30 ರಿಂದ ಜನ ಸಾಮಾನ್ಯರು ಹಾಗೂ ಕಡುಬಡವರು ಕಡಿಮೆ ದರದಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯಾದಲ್ಲಿ ಉಚಿತ ಮರಳು ನೀತಿ ಜಾರಿಗೆ ಬರಲಿದೆ. * ಈ ಉಚಿತ ಮರಳು ನೀತಿ ಯೋಜನೆಯು 10 ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ, ಮತ್ತು ಇದರಿಂದ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಬಹುದು ಎನ್ನಲಾಗಿದೆ. * ಏಪ್ರಿಲ್.30 ರಂದು ಜಾರಿಗೆ ತರಲಿರುವ ಈ ಉಚಿತ ಮರಳು ನೀತಿ ಮತ್ತು ಹೊಸ ಮರಳು ನೀತಿಯನ್ನು ಜಾರಿ ಮಾಡಲಾಗುತ್ತದೆ, ಈ ಮರುಳು ನೀತಿಯು ದೇಶ ಹಾಗೂ ರಾಜ್ಯಗಳಿಗೆ ಮಾದರಿಯಾಗುವ ವಿಶ್ವಾಸ ಇದೇ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ತಿಳಿಸಿದರು.