Job Description: * ಭಾರತೀಯ ರೈಲ್ವೆಯು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದುಕೊಂಡು ಹೋಗಲು ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವ ಯೋಜನೆ ಇಲ್ಲ ಎಂದು ತಿಳಿಸಿದೆ. * ರೈಲ್ವೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸದ್ಯ ಇರುವ ರೈಲುಗಳೇ ಸಾಕಾಗುತ್ತವೆ ಎಂದು ತಿಳಿಸಿದ್ದಾರೆ, ಒಂದು ವೇಳೆ ಅಗತ್ಯ ಬಿದ್ದರೆ ಹೆಚ್ಚಿನ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಸಿದ್ಧವಾಗಿದೆ ಎಂದು ತಿಳಿಸಿದರು. * ಸದ್ಯ ಇರುವ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗಾಗಿ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. * ಭಾರತೀಯ ರೈಲ್ವೆಯು ಇಲಾಖೆಯು ಪ್ರತಿ ದಿನಕ್ಕೆ ಸರಿ ಸುಮಾರು 1,402 ವಿಶೇಷ ರೈಲು ಸೇವೆಗಳನ್ನು ಒದಗಿಸುತ್ತಿದೆ. * ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಮೇ 1ರಿಂದ ಜುಲೈ 9ರವರೆಗೆ ಸರಿ ಸುಮಾರು 63 ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿಸಲು ಭಾರತೀಯ ರೈಲ್ವೆ ಒಟ್ಟು 4,615 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಲಾಗಿತ್ತು ಎಂದು ಭಾರತೀಯ ರೈಲ್ವೆ ತಿಳಿಸಿದೆ. ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಮಾಹಿತಿ : * ಭಾರತೀಯ ರೈಲ್ವೆ ಭಾರತದ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯನ್ನು ನಿರ್ವಹಿಸುವ ರೈಲ್ವೆ ಸಚಿವಾಲಯದ ಮಾಲೀಕತ್ವದಲ್ಲಿರುವ ಸರ್ಕಾರಿ ಸಂಸ್ಥೆಯಾಗಿದೆ. * ಇದು ಮಾರ್ಚ್ 31, 2020 ರ ವೇಳೆಗೆ 67,956 ಕಿ.ಮೀ ಉದ್ದವನ್ನು ಹೊಂದಿರುವ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವನ್ನು ಗಾತ್ರದಿಂದ ನಿರ್ವಹಿಸುತ್ತದೆ. * ಗ್ರಾಹಕ ಸೇವೆ ಸಂಖ್ಯೆ : 139 * ಸ್ಥಾಪನೆ : 16 ಏಪ್ರಿಲ್ 1853, ಭಾರತ * ಪ್ರಧಾನ ಕಚೇರಿ : ನವದೆಹಲಿ * ನೌಕರರ ಸಂಖ್ಯೆ: 13,08,000 (2016-2017) * ಆದಾಯ: 1.97 ಲಕ್ಷ ಕೋಟಿ ರೂ. (ಯುಎಸ್ $ 28 ಬಿಲಿಯನ್, 2018–2019)