Job Description: * ಪಾಕಿಸ್ತಾನದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಜಮಾಯಿತ್ ಉಲೇಮಾ ಏ ಇಸ್ಲಾಂ ಸಂಘಟನೆಯ ಸದಸ್ಯರು ಹಿಂದೂ ದೇವಾಲಯವನ್ನು ನಾಶಪಡಿಸಿದ್ದರು, ಇದೀಗ ಆ ದೇವಾಲಯ ಮರು ನಿರ್ಮಾಣಕ್ಕಾಗಿ ಪಾಕಿಸ್ತಾನ ಸರ್ಕಾರವು 3.48 ಕೋಟಿ ಪಾಕಿಸ್ತಾನಿ ರೂ. ಬಿಡುಗಡೆ ಮಾಡಿದೆ. * ಈ ದೇವಾಲಯ ಮರು ನಿರ್ಮಾಣದ ಹಣವನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸರ್ಕಾರವು ಬಿಡುಗಡೆಗೊಳಿಸಿದೆ. * ಈ ಹಿಂದೆ ಅಂದರೆ 1997 ರಲ್ಲೊಂದು ಘಟನೆ ನಡೆದಿತ್ತು, ಆ ಸಂಧರ್ಭದಲ್ಲಿ ದೇಶದ ಸಂವಿಧಾನ ಪ್ರಕಾರ ಅಲ್ಪಸಂಖ್ಯಾತರಾಗಿರುವ ಹಿಂದುಗಳಿಗೆ ಪೂರ್ಣ ಪ್ರಮಾಣದ ಭದ್ರತೆಯನ್ನು ನೀಡಲಾಗುತ್ತದೆ ಎಂದು ಸ್ಥಳೀಯ ಮುಸ್ಲಿಂ ಧಾರ್ವಿುಕ ಮುಖಂಡರು ಭರವಸೆ ನೀಡಿದ್ದರು, ಆದರೆ ಆ ಯಾವ ಭರವಸೆ ಕೂಡ ಇಲ್ಲಿಯವರೆಗೂ ಪಾಲನೆಯಾಗಿಲ್ಲ ಎಂದು ತಿಳಿದು ಬಂದಿದೆ.