Job Description: * ಭಾರತೀಯ ಕೋಸ್ಟ್ ಗಾರ್ಡ್ ಗಸ್ತಿಗಾಗಿ ಎರಡು ಫಾಸ್ಟ್ ಪೆಟ್ರೋಲ್ ಹಡಗುಗಳನ್ನು ಉತ್ತರ ಕನ್ನಡ ಕರಾವಳಿಯಲ್ಲಿನ ನಿಯೋಜನೆ ಮಾಡಿದೆ. * ಭಾರತೀಯ ಕೋಸ್ಟ್ ಗಾರ್ಡ್ ಸಾವಿತ್ರಿಬಾಯಿ ಫುಲೆ ಮತ್ತು ಕಸ್ತೂರಬಾ ಗಾಂಧಿ ಎಂಬ ಎರಡು ಫಾಸ್ಟ್ ಪೆಟ್ರೋಲ್ ಹಡಗುಗಳನ್ನು ಕಾರವಾರದ ಕರಾವಳಿಯಲ್ಲಿ ನಿಯೋಜಿಸಿದೆ. * ಕಾರವಾರದ ಕರಾವಳಿಯಲ್ಲಿ ನಿಯೋಜಿಸಿರುವ ಈ ಫಾಸ್ಟ್ ಪೆಟ್ರೋಲ್ ಹಡಗುಗಳನ್ನೂ ಗೋವಾ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಾಣ ಮಾಡಿದೆ. * ಈ ಫಾಸ್ಟ್ ಪೆಟ್ರೋಲ್ ಹಡಗುಗಳು ಗಂಟೆಗೆ 35 ನಾಟ್ಸ್ ವೇಗವನ್ನು ಸಾಗುವ ಸಮರ್ಥ್ಯ ಹೊಂದಿವೆ, ಮತ್ತು ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.