Job Description: * ಇದೆ ಏಪ್ರಿಲ್ 01 ರಿಂದ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವು ಪಂಜಾಬನ ಮಹಿಳೆಯರಿಗೆ ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಯನ್ನು ಘೋಷಣೆ ಮಾಡಿದೆ. * ಈ ಮೊದಲು ಮಹಿಳೆಯರಿಗೆ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಬಸ್ ಮತ್ತು ಮೆಟ್ರೋಗಳಲ್ಲಿ ಉಚಿತ ಪ್ರಯಾಣ ಘೋಷಿಸಿತ್ತು. * ಮಾರ್ಚ್ 5 ರಂದು ಮಹಿಳೆ ಮತ್ತು ಯುವತಿಯರ ಸಬಲೀಕರಣಗೊಳಿಸುವದು ಸರ್ಕಾರದ ಪ್ರಯತ್ನದ ಭಾಗವಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಘೋಷಣೆ ಮಾಡಿದ್ದರು. * 2011ರ ಜನಗಣತಿಯ ಪ್ರಕಾರ ಪಂಜಾಬ್ ರಾಜ್ಯದ 1.31 ಕೋಟಿ ಮಹಿಳೆಯರು ಮತ್ತು ಯುವತಿಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ. * ಪಂಜಾಬ್ನ ಸರ್ಕಾರಿ ಸ್ವಾಮ್ಯದ ಬಸ್ಗಳಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಪಡೆಯಬಹುದಾಗಿದೆ ಎಂದು ತಿಳಿದು ಬಂದಿದೆ.