Job Description: * ಶ್ರೀಲಂಕಾದ ಕ್ರಿಕೆಟ್ನ ಇತಿಹಾಸ ಪುಟದಲ್ಲಿ ರೆಕಾರ್ಡ್ ಸೃಷ್ಟಿಸಿದ ಶ್ರೀಲಂಕಾದ ಆಲ್ರೌಂಡರ್ ತಿಸಾರ ಪೆರೇರ. * ತಿಸಾರ ಪೆರೇರ ಅವರು ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇವರದಾಗಿದೆ. * ಶ್ರೀಲಂಕಾದ ಪನಗೊಡಾ ಪಟ್ಟಣದ ಆರ್ಮಿ ಗ್ರೌಂಡ್ ನಲ್ಲಿ ಬ್ಲೂಮ್ ಫೀಲ್ಡ್ ಕ್ರಿಕೆಟ್ ಹಾಗೂ ಅಥ್ಲೆಟಿಕ್ ಕ್ಲಬ್ ವಿರುದ್ಧ ನಡೆದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಶ್ರೀಲಂಕಾದ ಆರ್ಮಿ ತಂಡದ ಪರ ಆಟವಾಡಿದ 31 ವರ್ಷದ ತಿಸಾರ ಪೆರೇರ ಅವರು ಈ ಸಾಧನೆ ಮಾಡಿದ್ದಾರೆ. * ತಿಸಾರ ಪೆರೇರ ಅವರು ಒಟ್ಟಾರೆ 13 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ. * ಈ ಹಿಂದೆ 2005ರಲ್ಲಿ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಕೌಶಲ್ಯ ವೀರರತ್ನೆ ಅವರು 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಾಧನೆ ಮಾಡಿದ್ದರು. * ಒಂದೇ ಓವರ್'ನಲ್ಲಿ 6 ಸಿಕ್ಸರ್ ಸಿಡಿಸಿದ ವಿಶ್ವದ 9ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ ತಿಸಾರ ಪೆರೇರ ಅವರದಾಗಿದೆ.