Job Description: * ಭಾರತವು ನೆರೆಯ ರಾಷ್ಟ್ರವಾಗಿರುವ ನೇಪಾಳ್ ಸೇನೆಗೆ 1 ಲಕ್ಷ ಡೋಸ್ ಕೋವಿಡ್-19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ. * ಭಾರತೀಯ ಸೇನಾ ಅಧಿಕಾರಿಗಳು ನೇಪಾಳ ಸೇನೆಗೆ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಲಸಿಕೆಗಳನ್ನು ನೀಡಿದ್ದಾರೆ ಎಂದು ಕಠ್ಮಂಡುವಿನ ಭಾರತೀಯ ರಾಯಭಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ. * ಈ ಕೋರೋಣ ಲಸಿಕೆ ನೀಡಿದ್ದರಿಂದ ಭಾರತ - ನೇಪಾಳ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. * ನೇಪಾಳ ರಾಷ್ಟ್ರಕ್ಕೆ ಚೀನಾ ಕೂಡ 8 ಲಕ್ಷ ಡೋಸ್ ಕೋವಿಡ್-19 ಲಸಿಕೆಗಳನ್ನು ನೀಡಿದೆ ಎಂದು ನೇಪಾಳ'ನ ಮೂಲಗಳು ತಿಳಿಸಿವೆ.