Job Description: * ಅಮೇರಿಕ ಅಧ್ಯಕ್ಷ ಜೋ ಬೈಡನ್ ಸರಕಾರವು ಭಾರತ-ಅಮೆರಿಕನ್ ತಜ್ಞ ವೈದ್ಯ ವಿವೇಕ್ ಮೂರ್ತಿಯವರನ್ನು ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದೆ ಹಾಗೂ ಸೆನೆಟ್ ಅನುಮೋದನೆ ನೀಡಿದೆ. * ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಡಾ. ಮೂರ್ತಿ ಅವರು 2ನೇ ಬಾರಿ ನೇಮಕಗೊಂಡಿದ್ದಾರೆ. * ಈ ಮೊದಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರವರ ಸರ್ಕಾರವಿದ್ದಾಗ ಅಂದರೆ 2013ರಲ್ಲಿ ಡಾ.ವಿವೇಕ್ ಮೂರ್ತಿ ಸರ್ಜನ್ ಜನರಲ್ ಹುದ್ದೆಗೆ ನೇಮಕಗೊಂಡಿದ್ದರು. * ಅಮೇರಿಕ ಸರ್ಜನ್ ಜನರಲ್ ಹುದ್ದೆಗೆ ನೇಮಕಗೊಂಡ ಅಂತ್ಯಂತ ಕಿರಿಯ ವಯಸ್ಸಿನ ವೈದ್ಯ ಎಂದು ಹೆಸರುವಾಸಿಯಾಗಿದ್ದಾರೆ. * ಕರ್ನಾಟಕದ ಡಾ.ವಿವೇಕ್ ಮೂರ್ತಿಯವರು ಅಮೆರಿಕದಲ್ಲಿ ಡಾಕ್ಟರ್ಸ್ ಫಾರ್ ಅಮೆರಿಕ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ, ಈ ಸಂಸ್ಥೆಯಿಂದ ಅತೀ ಕಡಿಮೆ ದರಗಳಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಗುರಿಯನ್ನು ಈ ಸಂಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ. ಡಾ.ವಿವೇಕ್ ಮೂರ್ತಿ ರವರ ಬಗ್ಗೆ ಮಾಹಿತಿ : * ವಿವೇಕ್ ಹಲ್ಲೆಗೆರೆ ಮೂರ್ತಿ ಅಮೆರಿಕದ ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆ ಆಯೋಗದ ದಳದಲ್ಲಿ ವೈಸ್ ಅಡ್ಮಿರಲ್ ಆಗಿದ್ದರು. * ಡಾ.ವಿವೇಕ್ ಅವರು ಯುನೈಟೆಡ್ ಸ್ಟೇಟ್ಸ್ ನ 21 ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. * 2014 ರಿಂದ 2017 ರವರೆಗೆ 19 ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. * ಜನನ : 10 ಜುಲೈ 1977 ಹಡರ್ಸ್ಫೀಲ್ಡ್, ಯುನೈಟೆಡ್ ಕಿಂಗ್ಡಮ್ * ಶಿಕ್ಷಣ : ಯೇಲ್ ಸ್ಕೂಲ್ ಆಫ್ ಮೆಡಿಸಿನ್ 1998-2003