Job Description: * ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2 ದಿನಗಳ ಬಾಂಗ್ಲಾದೇಶದ ಪ್ರವಾಸವನ್ನು ಪ್ರಾರಂಭ ಮಾಡಿದ್ದಾರೆ, ಈ ಪ್ರವಾಸದಿಂದ ಭಾರತ-ಬಾಂಗ್ಲಾದೇಶ ನಡುವೆ ಸ್ನೇಹ ಸಂಬಂಧ ಹೆಚ್ಚಲಿದೆ ಎಂದು ಮೋದಿಜೀ ತಿಳಿಸಿದರು. * ಕೆಳೆದ ವರ್ಷ ಸಾಂಕ್ರಾಮಿಕ ರೋಗ ಕೋರೋಣ ಹರಡಿದ ಹಿನ್ನಲೆಯಿಂದಾಗಿ ಇದು ಮೋದಿಯವರ ಮೊದಲ ವಿದೇಶ ಪ್ರಯಾಣವಾಗಿದೆ. * ಭಾರತದ ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಸುವರ್ಣ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. * ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ದೇಶದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಇದೇ ಮಾರ್ಚ್ 27ರ ತನಕ ನಡೆಯಲಿದೆ. * ಬಾಂಗ್ಲಾದೇಶಕ್ಕೆ 1971ರ ವಿಮೋಚನಾ ಯುದ್ಧದ ನಂತರ ಪಾಕಿಸ್ತಾನ ದೇಶದಿಂದ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಭಾರತ ಪ್ರಮುಖ ಪಾತ್ರವಹಿಸಿತ್ತು. * ಸ್ವಾತಂತ್ರ್ಯ ದೊರಕಿದ ಸಂಬ್ರಮಾಚರಣೆ ಮತ್ತು ಇದೆ ಸಂದರ್ಭದಲ್ಲಿ ಬಾಂಗ್ಲಾ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಆಚರಣೆ ನಡೆಯಲಿದೆ.