Job Description: * ಏಷ್ಯಾದ ಅತಿದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. * ಇದು ಶ್ರೀನಗರ ದಾಲ್ ಸರೋವರದ ಸಮೀಪವಿರುವ ಏಷ್ಯಾದ ಅತಿದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವವಾಗಿದೆ. * ಈಗಿರುವ ಟ್ಯೂಲಿಪ್ ಉದ್ಯಾನವನ್ನು ಈ ಮೊದಲು ಸಿರಾಜ್ ಬಾಗ್ ಎಂದು ಕರೆಯುತ್ತಿದ್ದರು. * 2008ರಲ್ಲಿ ಈ ಉದ್ಯಾನವನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಗುಲಾಬ್ ನಬಿ ಆಜಾದ್ ಉದ್ಘಾಟಣೆ ಮಾಡಿದ್ದರು. * ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಟ್ಯೂಲಿಪ್ ಹೂಗಳ ಉದ್ಯಾನವನದ ಉಸ್ತುವಾರಿಯನ್ನು ನಿರ್ವಹಿಸುತ್ತಿದೆ. * ಈ ಉದ್ಯಾನವವು ಹಿಮಚ್ಛಾದಿತ ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನ 30 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. * ಈ ಟ್ಯೂಲಿಪ್ ಹೂಗಳ ಉದ್ಯಾನವು 15 ಲಕ್ಷ ಟ್ಯೂಲಿಪ್ ಹೂಗಳಿಂದ ಕೂಡಿದೆ ಮತ್ತು 62 ಬಗೆಯ ಹೂಗಳಿವೆ ಎಂದು ಉದ್ಯಾನವನದ ಉಸ್ತುವಾರಿ ಇನಾಂ ರೆಹಮಾನ್ ಸೂಫಿ ಯವರು ಮಾಹಿತಿಯನ್ನು ನೀಡಿದರು.