Job Description: * ದೇಶೀ ನಿರ್ಮಿತ ಸಾಮಾಜಿಕ ಜಾಲತಾಣ 'ಕೂ'ನಲ್ಲಿ ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಬಂಡವಾಳ ತೊಡಗಿಸಿದ್ದಾರೆ. * ಜಾವಗಲ್ ಶ್ರೀನಾಥ್'ರವರು 'ಕೂ'ನ ಮೂಲ ಕಂಪನಿಯಾಗಿರುವ ಬಾಂಬಿನೇಟ್ ಟೆಕ್ನಾಲಜೀಸ್'ನಲ್ಲಿ ಹಣಕಾಸು ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. * ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್'ರವರು ಮೈಸೂರು ಎಕ್ಸ್ಪ್ರೆಸ್ ಖ್ಯಾತಿ ಪಡೆದುಕೊಂಡಿದ್ದರು. * ಪ್ರಸ್ತುತ ಜಾವಗಲ್ ಶ್ರೀನಾಥ್'ರವರು ಸದ್ಯ ಐಸಿಸಿ(ICC) ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. * ಪ್ರಸ್ತುತ ಜಾವಗಲ್ ಶ್ರೀನಾಥ್'ರವರು 'ಕೂ'ನಲ್ಲಿ ಇದೀಗ 1ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. * ಸದ್ಯ ಈ ಕೂ ಆಪ್ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಬೆಂಗಾಲಿ ಮತ್ತಿತರ ಭಾಷೆಗಳಲ್ಲಿ ಬಳಸಬಹುದಾಗಿದೆ. ಜಾವಗಲ್ ಶ್ರೀನಾಥ್ ರವರ ಬಗ್ಗೆ ಮಾಹಿತಿ : * ಜವಾಗಲ್ ಶ್ರೀನಾಥ್, ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿದ್ದಾರೆ * ಅವರು ಭಾರತದ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. * ಏಕದಿನ ಪಂದ್ಯಗಳಲ್ಲಿ 300 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ವೇಗದ ಬೌಲರ್ ಎಂದು ಎನಿಸಿಕೊಂಡಿದ್ದಾರೆ * ಜನನ : 31 ಆಗಸ್ಟ್ 1969 ಜವಾಗಲ್ * ಬೌಲಿಂಗ್ : ಬಲಗೈ ವೇಗ * ಏಕದಿನ ಚೊಚ್ಚಲ : 18 ಅಕ್ಟೋಬರ್ 1991 ಪಾಕಿಸ್ತಾನದ ವಿರುದ್ಧ ಕೊನೆಯ ಏಕದಿನ : 23 ಮಾರ್ಚ್ 2003 ಆಸ್ಟ್ರೇಲಿಯಾ