Job Description: * ಭಾರತ ಮತ್ತು ಜಪಾನ್ ದೇಶಗಳು ಜಲಸಂಪನ್ಮೂಲ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಪರಸ್ಪರ ಒಪ್ಪಿಕೊಂಡು ಸಹಿ ಹಾಕಿವೆ ಮತ್ತು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. * ಈ ಜಲಸಂಪನ್ಮೂಲ ಒಪ್ಪಂದದಿಂದಾಗಿ ಮಾಹಿತಿ ಜ್ಞಾನ ಮತ್ತು ತಂತ್ರಜ್ಞಾನದ ವಿಚಾರ ವಿನಿಮಯವನ್ನು ಮಾಡಿಕೊಳ್ಳುವದಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. * ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಅಡಿಯಲ್ಲಿ 'ಜಲಸಂಪನ್ಮೂಲ ಇಲಾಖೆಯು ಗಂಗಾ ನದಿ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಒಪ್ಪಂದದಲ್ಲಿ ತಿಳಿಸಿದೆ. * ಜಪಾನ್ ಸರ್ಕಾರವು ಭೂ ಮೂಲಸೌಕರ್ಯ ಸಚಿವಾಲಯದ ಅಡಿಯಲ್ಲಿ ನೀರು ಮತ್ತು ವಿಪತ್ತು ನಿರ್ವಹಣಾ ಬ್ಯೂರೋ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿದು ಬಂದಿದೆ. * ಭಾರತ-ಜಪಾನ್ ಜಲಸಂಪನ್ಮೂಲ ಒಪ್ಪಂದದಿಂದಾಗಿ ನೀರಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಬೆಳೆಸಲು ಅನುಕೂಲವಾಗಲಿದೆ, ಜೊತೆಗೆ ಜ್ಞಾನ, ತಂತ್ರಜ್ಞಾನಗಳ ಮಾಹಿತಿಗಳನ್ನೂ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.