Job Description: * ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯರಿಗಾಗಿ ಪೌಷ್ಠಿಕಾಂಶದ ಬೆಂಬಲ ನೀಡುವ ಸಲುವಾಗಿ ಪೋಶನ್ ಅಭಿಯಾನ್’ ಅನ್ನು ಪ್ರಾರಂಬಿಸಲಾಗುವದು ಎಂದು ತಿಳಿಸಿದೆ. * ಈ ಮಿಷನ್ ಯೋಜನೆ ಅಡಿಯಲ್ಲಿ ವೃದ್ಧಾಶ್ರಮಗಳಲ್ಲಿ ಇಲ್ಲದ ಮತ್ತು ಅಪೌಷ್ಟಿಕತೆಗೆ ಬಲಿಯಾದ ಅನಗತ್ಯ ಹಿರಿಯರಿಗೆ ಬೆಂಬಲ ನೀಡುವ ಉದ್ದೇಶವಾಗಿದೆ. * ಈ ಮಿಷನ್ ಸಹಾಯದಿಂದ ಸ್ಥಳೀಯವಾಗಿ ಸಿಗುವ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಮಧ್ಯಾಹ್ನದ ಉಟವನ್ನು ಪೂರೈಸಲು ನೆರವಾಗಲಿದೆ ಎಂದು ತಿಳಿದು ಬಂದಿದೆ. * ಈ ಪೋಶನ್ ಅಭಿಯಾನ್ ಯೋಜನೆಯನ್ನು ಗ್ರಾಮ ಪಂಚಾಯಿತಿ ಮತ್ತು ನಗರ ಪುರಸಭೆ ಜಾರಿಗೆ ತರಲಿವೆ. * ಹಿರಿಯ ನಾಗರಿಕರ ಕಲ್ಯಾಣ ನಿಧಿ’ ಯನ್ನು ಪೋಶನ್ ಅಭಿಯಾನ್ ಮಿಷನ್'ನ್ನು ಕಾರ್ಯರೂಪಕ್ಕೆ ತರಲು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. * ಪೋಶನ್ ಅಭಿಯಾನ್ ಯೋಜನೆಯನ್ನು ರಾಷ್ಟ್ರೀಯ ನ್ಯೂಟ್ರಿಷನ್ ಮಿಷನ್ ಎಂದು ಕರೆಯಲಾಗುತ್ತದೆ.