Job Description: * ಭಾರತ-ಪಾಕಿಸ್ತಾನ ದೇಶಗಳು 2 ವರ್ಷಗಳ ಬಳಿಕ ಸಿಂಧೂ ನದಿ ನೀರಿನ ಹಂಚಿಕೆ ಮಾತುಕತೆ ನಡೆಸುತ್ತಿದೆ. * ಸಿಂಧೂ ಆಯೋಗದ ವಾರ್ಷಿಕ ಸಭೆ ರಾಷ್ಟ್ರ ರಾಜಧಾನಿಯಲ್ಲಿ, ಭಾರತ ಮತ್ತು ಪಾಕಿಸ್ತಾನವು ದೇಶಗಳ ನಡುವೆ ನಡೆಯಲಿದೆ. * ಈ ಎರಡು ದೇಶಗಳ ಅಧಿಕಾರಿಗಳು ವಾರ್ಷಿಕವಾಗಿ ಒಮ್ಮೆಯಾದರೂ ಭೇಟಿಯಾಗುತ್ತಾರೆ, ಕೊನೆಯದಾಗಿ 2018 ರ ಆಗಸ್ಟ್ನಲ್ಲಿ ಈ ಸಭೆ ನಡೆದಿತ್ತು. * 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಿಂದಾಗಿ ಈ ಸಭೆ ತಾತ್ಕಾಲಿಕವಾಗಿ ರದ್ದಾಗಿತ್ತು. * ಭಾರತ - ಪಾಕಿಸ್ತಾನ 1960ರಲ್ಲಿ ಸಿಂಧು ನದಿ ನೀರನ್ನು ಹಂಚಿಕೊಳ್ಳುವ ಸಿಂಧೂ ಜಲ ಒಪ್ಪಂದವನ್ನು ಮಾಡಿಕೊಂಡಿದ್ದವು. * ಈ ಸಿಂಧು ನದಿ ವಿಚಾರಕ್ಕಾಗಿ ಭಾರತದ ಪಿ.ಕೆ.ಸಕ್ಸೇನಾ ನೇತೃತ್ವ ವಹಿಸಿಕೊಳ್ಳಲಿದ್ದಾರೆ, ಹಾಗೂ ಸೈಯದ್ ಮುಹಮ್ಮದ್ ಮೆಹರ್ ಅಲಿ ಶಾ ರವರು ಪಾಕಿಸ್ತಾನದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.