Job Description: * 2020ರ ಸಾಲಿನ ಗಾಂಧಿ ಪ್ರಶಸ್ತಿಗೆ ಬಾಂಗ್ಲಾದೇಶದ ಶೇಕ್ ಮುಜೀಬುರ್ರಹ್ಮಾನ್'ರವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಮಾಹಿತಿಯನ್ನು ನೀಡಿದೆ. * 2019ರ ಪ್ರತಿಷ್ಠಿತ ಗಾಂಧಿ ಪ್ರಶಸ್ತಿಯನ್ನು ಒಮಾನ್'ನ ದಿವಂಗತ ಸುಲ್ತಾನ್ ಖಬೂಸ್ ಬಿನ್ ಸಯೀದ್ ಅಲ್ ಸಯೀದ್ ಅವರಿಗೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಇವರು ಗಲ್ಫ್ ಪ್ರದೇಶದಲ್ಲಿ ಶಾಂತಿ ಹಾಗೂ ಅಹಿಂಸೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಗುರುತಿಸಿ ಈ ಗಾಂಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. * ಭಾರತ ಸರ್ಕಾರವು ಮಹಾತ್ಮಾ ಗಾಂಧಿಯವರ 125ನೇ ಜನ್ಮ ದಿನಾಚರಣೆಯ ಸವಿನೆನೆಪಿನಲ್ಲಿ 1995ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿದೆ. * ಪ್ರತಿ ವರ್ಷ ಮಹಾತ್ಮಾ ಗಾಂಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ, ರಾಷ್ಟ್ರೀಯತೆ, ಯಾವುದೇ ಜನಾಂಗ, ಭಾಷೆ, ಜಾತಿ,ಮತ, ಲಿಂಗ ಯಾವುದನ್ನೂ ಪರಿಗಣಿಸದೆ ಈ ಪ್ರಶಸ್ತಿ ಮುಕ್ತವಾಗಿ ಎಲ್ಲರಿಗೂ ನೀಡಲಾಗುತ್ತದೆ.