Job Description: * 2020ರಲ್ಲಿ ಸರಿ ಸುಮಾರು 7.5 ಕೋಟಿ ಭಾರತಿಯರು ಕೋರೋಣ ಸಾಂಕ್ರಾಮಿಕ ರೋಗದ ಆರ್ಥಿಕ ಹಿಂಜರಿತದಿಂದ ಜನರ ಬದುಕು ಬಡತನ ರೇಖೆಯಿಂದ ಕೆಳಮಟ್ಟಕೆ ಹೋಗಿದೆ ಎಂದು ಪ್ಯೂ ವರದಿ ನೀಡಿದೆ. * ಕೋರೋಣದಿಂದ ಇಡೀ ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಉಂಟಾಗಿದೆ ಎಂದು ಅಂತರಾಷ್ಟ್ರೀಯ ಪ್ಯೂ ಸಂಶೋಧನಾ ಕೇಂದ್ರ ಅಧ್ಯಯನ ನಡೆಸಿ ಈ ಮಾಹಿತಿಯನ್ನು ಹೊರಹಾಕಿದೆ. * ಪ್ಯೂ ಸಂಶೋಧನಾ ಕೇಂದ್ರ ನೀಡಿರುವ ವರದಿಯ ಪ್ರಕಾರ ದೇಶದ ಸುಮಾರು 32 ಕೋಟಿ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಮಟ್ಟ ಕುಸಿದಿದೆ ಎಂದು ವರದಿ ಮಾಡಿದೆ. * ಪ್ರಸ್ತುತ ಪ್ಯೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಭಾರತ ದೇಶದಲ್ಲಿ 13.4 ಕೋಟಿ ಬಡ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. * ಚೀನಾ ದೇಶದಲ್ಲಿ 1ಕೋಟಿ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಮಟ್ಟ ಕುಸಿದಿದೆ ಎಂದು ವರದಿ ಮಾಡಿದೆ,