Job Description: * 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಘೋಷಣೆ ಮಾಡಲಾಗಿದೆ. * ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. * 2019ರಲ್ಲಿ ಕೊರೊನಾ ಹಿನ್ನಲೆಯಲ್ಲಿಯಿಂದಾಗಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿರಲಿಲ್ಲ. * ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 'ಅಕ್ಷಿ' ಚಿತ್ರ ಪಡೆದಿದೆ. * ಹಿಂದಿ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರದ್ಧಾ ಕಪೂರ್ ನಟನೆಯ 'ಚಿಚೋರ್' ಚಿತ್ರವು ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಪಡೆದಿದೆ. * ಕೇಸರಿ ಚಿತ್ರದ ಹಾಡು "ತೇರಿ ಮಿಟ್ಟಿ" ಹಾಡಿಗಾಗಿ ಬಿ ಪ್ರಾಕ್'ಗೆ ಬೆಸ್ಟ್ ಸಿಂಗರ್ ಪ್ರಶಸ್ತಿ ಲಭಿಸಿದೆ. * ಮಲಯಾಳಂನ ಜಲ್ಲಿಕಟ್ಟು ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.