Job Description: * ಅರುಣಾಚಲ ಪ್ರದೇಶದಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವ ರಾಜ್ಯದ ಮೊದಲ ಶಾಲೆಯನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ರವರು ಉದ್ಘಾಟಣೆ ಮಾಡಿದರು. * ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವ ಶಾಲೆಗೆ 'ನಯುಬು ನೈವಗಂ ಯೆರ್ಕೊ' ಎಂಬ ಹೆಸರನ್ನು ಇಡಲಾಗಿದೆ ಈ ಶಾಲೆಯನ್ನು ಸೆಪ್ಪಾ ಸಮೀಪದ ರಂಗ್ ಗ್ರಾಮದಲ್ಲಿ ಉದ್ಘಾಟಿಸಲಾಯಿತು. * ಅರುಣಾಚಲ ಪ್ರದೇಶದ ಈ ಶಾಲೆಯಲ್ಲಿ ಸ್ಥಳೀಯ ಸಂಪ್ರದಾಯ, ಭಾಷೆಗಳು, ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಮುಖ್ಯ ಮಂತ್ರಿ ಪೆಮಾ ಖಂಡು ರವರು ಮಾಹಿತಿ ನೀಡಿದರು. * ಅರುಣಾಚಲ ಪ್ರದೇಶ ಸರ್ಕಾರವು ಭಾಷೆ ಮತ್ತು ಸಂಸ್ಕೃತಿಯ ಶಾಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 3 ಕೋಟಿ ಅನುದಾನವನ್ನು ಮೀಸಲಿರಿಸಿದೆ. * ಈ ಶಾಲೆಗಳಲ್ಲಿ ಸ್ಥಳೀಯ ಸಂಸ್ಕೃತಿ, ಪರಂಪರೆ, ಭಾಷೆ, ಜೀವನ ವಿಧಾನವನ್ನು ಮತ್ತು ಬೌದ್ಧ ಧರ್ಮದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುವದು. * ವಿದ್ಯಾರ್ಥಿಗಳು ಈ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಶಾಲೆಗಳಲ್ಲಿ ಪದವಿಯನ್ನೂ ಪಡೆಯಬಹುದು.