Job Description: ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಆಚರಿಸಲಾಗುತ್ತದೆ, ಅದರಂತೆ ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜಲಶಕ್ತಿ ಅಭಿಯಾನವಾದ 'ಕ್ಯಾಚ್ ದಿ ರೇನ್' ಅಭಿಯಾನಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. * ಈ 'ಕ್ಯಾಚ್ ದಿ ರೇನ್' ಅಭಿಯಾನದ ಮೂಲಕ 'ಮಳೆ, ಯಾವಾಗ ಬೀಳುತ್ತೆ, ಎಲ್ಲಿ ಬೀಳುತ್ತದೆ' ಎಂಬ ಥೀಮ್ ನೊಂದಿಗೆ ಭಾರತದ ಉದ್ದಗಲಕ್ಕೂ ಈ ಆಂದೋಲನ ನಡೆಸಲಾಗುವುದು ಹಾಗು ಈ ಮೂಲಕ ನಮ್ಮ ದೇಶದಲ್ಲಿ ಜಲ ಸಂರಕ್ಷಣೆ ಪ್ರಯತ್ನಗಳು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ.