Job Description: * ಚುನಾವಣಾ ಆಯೋಗಕ್ಕೆ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳು 2018-19 ಆರ್ಥಿಕ ವರ್ಷದಲ್ಲಿ ಸಲ್ಲಿಸಿರುವ ಮಾಹಿತಿ ಪ್ರಕಾರ 7372.96 ಕೋಟಿ ರೂ. ಆಸ್ತಿ ಹೊಂದಿರುವದಾಗಿ ತಿಳಿದು ಬಂದಿದೆ. * 7 ರಾಷ್ಟ್ರೀಯ ಪಕ್ಷಗಳು 5349.25 ಕೋಟಿ ರೂ. ಆಸ್ತಿಯನ್ನು ಹೊಂದಿವೆ. * 41 ಪ್ರಾದೇಶಿಕ ಪಕ್ಷಗಳು 2023.71 ಕೋಟಿ ರೂ. ಆಸ್ತಿಯನ್ನು ಹೊಂದಿವೆ. * ಪ್ರಸ್ತುತ 7 ರಾಷ್ಟ್ರೀಯ ಪಕ್ಷಗಳಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಪಕ್ಷಗಳು. * ಬಿಜೆಪಿ ಸರಿ ಸುಮಾರು 2904.18 ಕೋಟಿರೂ.ಆಸ್ತಿ ಹೊಂದಿದೆ, ಕಾಂಗ್ರೆಸ್ ಪಕ್ಷವು 928.84 ಕೋಟಿ ರೂ.ಆಸ್ತಿ ಹೊಂದಿದೆ, ಬಿಎಸ್ಪಿ(BSP) 738 ಕೋಟಿ ರೂ ಆಸ್ತಿ ಹೊಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯಲ್ಲಿ ತಿಳಿದು ಬಂದಿದೆ. * ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಸಮಾಜವಾದಿ ಪಕ್ಷವು ಅತಿ ಹೆಚ್ಚು 572.21 ಕೋಟಿ ರೂ.ಆಸ್ತಿ ಹೊಂದಿದೆ. * 2018-19ನೇ ಆರ್ಥಿಕ ಸಾಲಿನಲ್ಲಿ ಸಾಲವನ್ನೂ ಹೊಂದಿರುವ ರಾಜಕೀಯ ಪಕ್ಷಗಳು. * ಕಾಂಗ್ರೆಸ್ ಪಕ್ಷದ ಸಾಲ 78.415 ಕೋಟಿ ರೂ. * ಬಿಜೆಪಿ ಪಕ್ಷದ ಸಾಲ 37.463 ಕೋಟಿ ರೂ. * ಕರ್ನಾಟಕದ ಜೆಡಿಎಸ್ 18.01 ಕೋಟಿ ರೂ. ಸಾಲ ಹೊಂದಿದೆ.