Job Description: * ಕೇಂದ್ರ ಸರ್ಕಾರವು ಪಿಎಂ ಶ್ರಮ ಯೋಗಿ ಮಂಧನ್ ಯೋಜನೆ ಅಡಿಯಲ್ಲಿ 60 ವರ್ಷ ವಯಸ್ಸಿನವರಿಗೆ ಸರ್ಕಾರದಿಂದ ತಿಂಗಳಿಗೆ 3000 ರೂ. ಪಿಂಚಣಿ ನೀಡಲು ಮುಂದಾಗಿದೆ. * ಈ ಯೋಜನೆ ಅಡಿಯಲ್ಲಿ ನೋಂದಣಿಯಾಗಿರುವ 45 ಲಕ್ಷ ಜನರಿಗೆ ಪಿಂಚಣಿ ನೀಡುವ ಮಹತ್ವದ ಯೋಜನೆಯನ್ನು ಸರ್ಕಾರ ಹೊಂದಿದೆ. * 60 ವರ್ಷ ವಯಸ್ಸಿನ ಕಾರ್ಮಿಕರಿಗೆ ಕನಿಷ್ಠ ಮಾಸಿಕ 3000 ರೂಪಾಯಿಗಳನ್ನ ಪಿಂಚಣಿಯಾಗಿ ನೀಡಲಾಗುವದು ಎಂದು ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರವು 2019ರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ ಜಾರಿಗೆ ತಂದಿದೆ. * ಈ ಯೋಜನೆಯನ್ನ ಭಾರತ ಸರ್ಕಾರವು LICಯೊಂದಿಗೆ ಜಂಟಿಯಾಗಿ ನಡೆಸುತ್ತಿದೆ. * ಈ ಯೋಜನೆ ಅಡಿಯಲ್ಲಿ 2021ರ ಮಾರ್ಚ್ 4ರವರೆಗೆ 44.90 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಪಿಎಂ ಶ್ರಮ ಯೋಗಿ ಮಂಧನ್ ಯೋಜನೆಯ ಬಗ್ಗೆ ಮಾಹಿತಿ : * ದೇಶದಲ್ಲಿರುವ 42 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ PM-SYM ಯೋಜನೆಯನ್ನು ಸಮರ್ಪಿಸಲಾಗಿದೆ. * ಸ್ವಾತಂತ್ರ್ಯಾ ನಂತರ ಪ್ರಥಮ ಬಾರಿಗೆ ಇಂಥ ಒಂದು ಯೋಜನೆಯನ್ನು ಕೋಟ್ಯಾಂತರ ಕೆಲಸಗಾರರಿಗೋಸ್ಕರ ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು. * PM-SYM ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಸಮಗ್ರ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.