Job Description: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವೀರಪ್ಪ ಮೊಯಿಲಿ * 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಆಯ್ಕೆಯಾಗಿದ್ದಾರೆ. * ಇವರು ರಾಜಕಾರಣಿ ಮತ್ತು ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ, ವೀರಪ್ಪ ಮೊಯಿಲಿ ಯವರ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಆಯ್ಕೆಯಾಗಿದೆ. * ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1 ಲಕ್ಷ ರೂ ನಗದು ಮತ್ತು ಕಾಣಿಕೆಯನ್ನು ಒಳಗೊಂಡಿದೆ. * ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಇಂಗ್ಲಿಷ್, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ತಲಾ ಒಂದು ಕೃತಿಯನ್ನು ಆಯ್ಕೆ ಮಾಡಲಾಗಿದೆ. * ಒಟ್ಟಾರೆ 7 ಕವನ ಸಂಕಲನ ಮತ್ತು 4 ಕಾದಂಬರಿಗಳು, 5 ಸಣ್ಣಕಥೆ, 2 ನಾಟಕಗಳು, 1 ಆತ್ಮಚರಿತ್ರೆ, ಜೊತೆಗೆ ಒಂದು ಮಹಾಕಾವ್ಯಕ್ಕೆ ಪ್ರಶಸ್ತಿ ಲಭಿಸಿದೆ. ವೀರಪ್ಪ ಮೊಯಿಲಿ ರವರ ಬಗ್ಗೆ ಮಾಹಿತಿ : * ವೀರಪ್ಪ ಮೊಯಿಲಿ ಅವರು ಕರ್ನಾಟಕ ರಾಜ್ಯದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದ ಭಾರತೀಯ ರಾಜಕಾರಣಿಯಾಗಿದ್ದರು * ಮೊಯಿಲಿ ಭಾರತದ ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿದ್ದರು * ವೀರಪ್ಪ ಮೊಯಿಲಿ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಿಂದ ಕರ್ನಾಟಕ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು * ವೀರಪ್ಪ ಮೊಯಿಲಿ ಜನನ: 12 ಜನವರಿ 1940 ಮೂಡಬಿದರಿ ಯಲ್ಲಿ ಜನಿಸಿದರು * ಇವರ ಪೂರ್ಣ ಹೆಸರು: ಮಾರ್ಪಾಡಿ ವೀರಪ್ಪ ಮೊಯಿಲಿ * 2012–2014 ರ ಅವಧಿಯಲ್ಲಿ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದರು.