Job Description: * ಕೇಂದ್ರ ಸರ್ಕಾರವು ಅತೀ ಹೆಚ್ಚು ಭಿಕ್ಷುಕರನ್ನು ಹೊಂದಿರುವ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. * ಕೇಂದ್ರ ಸರ್ಕಾರ ಇತ್ತೀಚಿಗೆ ನೀಡಿರುವ ವರದಿಯ ಪ್ರಕಾರ ಪಶ್ಚಿಮ ಬಂಗಾಳ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಭಿಕ್ಷುಕರನ್ನು ಹೊಂದಿರುವ ರಾಜ್ಯವಾಗಿ ಮೊದಲ ಸ್ಥಾನದಲ್ಲಿದೆ. * ಭಾರತದಲ್ಲಿ ಈ ಹಿಂದೆ 2011 ರ ಜನಗಣತಿ ಪ್ರಕಾರ 4,13,670 ಭಿಕ್ಷುಕರಿದ್ದರು. * ಕೇಂದ್ರ ಸಾಮಾಜಿಕ ನ್ಯಾಯ ಸಚಿವ ತಾವರ್ ಚಂದ್ ಗೆಹ್ಲೋಟ್'ರವರು ತಿಳಿಸಿದ 2011 ರ ಜನಗಣತಿ ಪ್ರಕಾರ ಆ ಸಮಯದಲ್ಲಿ ಪಶ್ಚಿಮ ಬಂಗಾಳ ರಾಜ್ಯವು 81,244 ಭಿಕ್ಷುಕರನ್ನು ಹೊಂದಿ ಅಗ್ರ ಸ್ಥಾನದಲ್ಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅತೀ ಹೆಚ್ಚು ಭಿಕ್ಷುಕರನ್ನು ಹೊಂದಿರುವ ರಾಜ್ಯಗಳ ಮಾಹಿತಿ: * ಪಶ್ಚಿಮ ಬಂಗಾಳ-81,224, ಉತ್ತರ ಪ್ರದೇಶ-65,835, ಆಂಧ್ರಪ್ರದೇಶ-30,218, ಬಿಹಾರ-29,723, ಮಧ್ಯಪ್ರದೇಶ-28,695, ರಾಜಸ್ಥಾನ-25,853, ದೆಹಲಿ-2,187, ಚಂಡೀಗಢ-121 ಭಿಕ್ಷುಕರನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ವರದಿಯನ್ನು ನೀಡಿದೆ. ಪಶ್ಚಿಮ ಬಂಗಾಳ ರಾಜ್ಯದ ಬಗ್ಗೆ ಮಾಹಿತಿ : * ಪಶ್ಚಿಮ ಬಂಗಾಳವು ಪೂರ್ವ ಭಾರತದ ಹಿಮಾಲಯ ಮತ್ತು ಬಂಗಾಳಕೊಲ್ಲಿಯ ನಡುವಿನ ರಾಜ್ಯವಾಗಿದೆ. * ಪಶ್ಚಿಮ ಬಂಗಾಳದ 2012 ರ್ ಜನಗಣತಿ ಪ್ರಕಾರ 9.03 ಕೋಟಿ ಜನಸಂಖ್ಯೆ ಹೊಂದಿದೆ * ರಾಜ್ಯಪಾಲ: ಜಗದೀಪ್ ಧಂಖರ್ * ರಾಜಧಾನಿ: ಕೋಲ್ಕತಾ * ಗವರ್ನರ್ : ಜಗದೀಪ್ ಧನ್ಖರ್ * ಮುಖ್ಯಮಂತ್ರಿ : ಮಮತಾ ಬ್ಯಾನರ್ಜಿ