Job Description: * ಪ್ರಸ್ತುತ 17 ರಾಜ್ಯಗಳು ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿವೆ. * ಉತ್ತರಾಖಂಡ ರಾಜ್ಯವು 'ಒನ್ ನೇಷನ್ ಒನ್ ರೇಷನ್ ಕಾರ್ಡ್' ವ್ಯವಸ್ಥೆ ಸುಧಾರಣೆಯನ್ನು ಅಳವಡಿಸಿಕೊಂಡಿದೆ. * ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಸುಧಾರಣೆ ಯನ್ನು ಪೂರ್ಣಗೊಳಿಸುವ ರಾಜ್ಯಗಳು ಗ್ರಾಸ್ ಸ್ಟೇಟ್ ಡಿಸ್ಟ್ರಿಕ್ಟ್ ಪ್ರಾಡಕ್ಟ್ (GSDP) ಶೇ.0.25ರಷ್ಟು ಹೆಚ್ಚುವರಿ ಸಾಲಪಡೆಯಲು ಅರ್ಹವಾಗಿವೆ. * ಹಣಕಾಸು ಸಚಿವಾಲಯವು ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಪ್ರಕಾರ ರಾಜ್ಯಗಳಿಗೆ 37,600 ಕೋಟಿ ಹೆಚ್ಚುವರಿ ಸಾಲ ಪಡೆಯುವ ಅನುಮತಿಯನ್ನು ನೀಡಿದೆ. * ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ವ್ಯವಸ್ಥೆ ಇಂದಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಫಲಾನುಭವಿಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ(ರೇಷನ್) ಪಡೆಯಬಹುದಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತಂದ 17 ರಾಜ್ಯಗಳು : * ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಣಿಪುರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ ಈ ಎಲ್ಲ ರಾಜ್ಯಗಳು 'ಒನ್ ನೇಷನ್ ಒನ್ ರೇಷನ್' ಕಾರ್ಡ್ ವ್ಯವಸ್ಥೆ ಜಾರಿಗೆ ಅಳವಡಿಸಿಕೊಂಡಿವೆ.