Job Description: * ಜನಪ್ರಿಯ ಸೋಷಿಯಲ್ ಮೀಡಿಯಾ ಆಯಪ್ ಆಗಿರುವ ಟಿಕ್ಟಾಕ್ ಅನ್ನು ಪಾಕಿಸ್ತಾನದಲ್ಲಿ ಕೋರ್ಟ್ ಆದೇಶದ ಮೇರೆಗೆ ನಿರ್ಬಂಧ ಮಾಡಲಾಗುವದು ಎಂದು ಪಾಕಿಸ್ತಾನ ದೇಶದ ಟೆಲಿಕಾಂ ನಿಯಂತ್ರಕದ ವಕ್ತಾರ ಖುರ್ರಮ್ ಮೆಹ್ರಾನ್ ಮಾಹಿತಿಯನ್ನು ನೀಡಿದ್ದಾರೆ. * ಪಾಕಿಸ್ತಾನದಲ್ಲಿ ಈ ಮೊದಲು ಅಕ್ಟೋಬರ್ನಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿತ್ತು, ಆದರೆ ಟಿಕ್ ಟಾಕ್ ಕಂಪನಿಯು "ಅಶ್ಲೀಲತೆ ಮತ್ತು ಅನೈತಿಕತೆಯನ್ನು" ಹರಡುವ ಎಲ್ಲಾ ಖಾತೆಗಳನ್ನು ನಿಷೇದ ಮಾಡಲಾಗುವದು ಎಂದು ತಿಳಿಸಿತ್ತು, ಸದ್ಯ ಟಿಕ್ ಟಾಕ್ ಕಂಪನಿಯು ಈ ತರಹದ ಯಾವುದೇ ಖಾತೆಗಳನ್ನು ನಿಷೇದ ಮಾಡಿಲ್ಲ ಎಂದು ಪಾಕಿಸ್ತಾನ ಕೋರ್ಟ್ ಈ ಟಿಕ್ ಟಾಕ್ ಅಪ್ಲಿಕೇಶನ್'ಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ.