Job Description: * ಸಿಎಂ ಯೋಗಿ ಆದಿತ್ಯನಾಥ್' ಅವರು ಇತ್ತೀಚಿಗೆ 'ಅರ್ಜುನ ಸಹಾಯಕ್ ನೀರಾವರಿ ಯೋಜನೆ'ಯನ್ನು ಹಮೀರ್ಪುರ, ಬಂಡಾ ಮತ್ತು ಮಹೋಬಾದ ವ್ಯಾಪ್ತಿಯಲ್ಲಿ ಯೋಜನೆಯಾಗಿದ್ದು, ಈ ಯೋಜನೆಯಿಂದ ಇಲ್ಲಿನ ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ತಿಳಿಸಿದರು. * ಈ ಅರ್ಜುನ ಸಹಾಯಕ್ ನೀರಾವರಿ ಯೋಜನೆಯ 2,600 ಕೋಟಿ ರೂ. ಮೌಲ್ಯದಾಗಿದ್ದು, ಇದು ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಿದೆ, ಹಾಗೂ ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. * ಮಹೋಬಾ ಜಿಲ್ಲೆಯ ಅರ್ಜುನ್ ಸಹಾಯಕ್ ಯೋಜನೆಯಡಿಯ ಲಹಚುರ ಅಣೆಕಟ್ಟು ಪರಿಶೀಲನೆಯನ್ನು ಯೋಗಿ ಆದಿತ್ಯನಾಥ್'ರವರು ನಡೆಸಿದರು. * ಧಾಸನ್ ನದಿಯ ಅರ್ಜುನ ಸಹಾಯಕ್ ನೀರಾವರಿ ಯೋಜನೆಯು ಹಮೀರ್ಪುರ, ಬಂಡಾ ಮತ್ತು ಮಹೋಬಾದ 168 ಉತ್ತರ ಪ್ರದೇಶದ ಗ್ರಾಮಗಳ 1.5 ಲಕ್ಷ ರೈತರಿಗೆ ನೀರಾವರಿ ಸೌಲಭ್ಯವನ್ನು ನೀಡಲಿದೆ. * ಈ ಯೋಜನೆಯಿಂದಾಗಿ ಸುಮಾರು 4ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ, ಜೊತೆಗೆ 15,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವದು ಎಂದು ತಿಳಿಸಲಾಗಿದೆ. * ಮುಂದಿನ ದಿನಗಳಲ್ಲಿ ಈ ಅರ್ಜುನ ಸಹಾಯಕ್ ನೀರಾವರಿ ಯೋಜನೆಯ ನೀರಾವರಿ ಸಾಮರ್ಥ್ಯವನ್ನು 44,382 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್'ಅವರು ತಿಳಿಸಿದರು. ಉತ್ತರ ಪ್ರದೇಶ ಬಗ್ಗೆ ಮಾಹಿತಿ : * ಸರಿಸುಮಾರು 200 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಇದು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. * ರಾಜಧಾನಿ : ಲಕ್ನೋ * ರಾಜ್ಯಪಾಲ : ಆನಂದಿಬೆನ್ ಪಟೇಲ್ * ಉತ್ತರ ಪ್ರದೇಶ 2012 ರ ಜನಗತಿ ಪ್ರಕಾರ ಜನಸಂಖ್ಯೆ 20.42 ಕೋಟಿ * ಮುಖ್ಯಮಂತ್ರಿ : ಯೋಗಿ ಆದಿತ್ಯನಾಥ್