Job Description: * ಭಾರತದ ತಂಡದ ಆಟಗಾರ ವಿಕೆಟ್ ಕೀಪರ್-ಬ್ಯಾಟ್ಸ್ ಮನ್' ಆಗಿರುವ ರಿಷಭ್ ಪಂತ್ ಇತ್ತೀಚಿಗೆ ನಡೆದ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ಪಂದ್ಯದಲ್ಲಿ ಶತಕ ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು, ಇದರಿಂದಾಗಿ ರಿಷಭ್ ಪಂತ್'ರವರು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನ ಪಡೆದಿದ್ದಾರೆ. * ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನವನ್ನು ರೋಹಿತ್ ಶರ್ಮ ಮತ್ತು ರಿಷಭ್ ಪಂತ್ ಹಂಚಿಕೊಂಡಿದ್ದಾರೆ. * ಭಾರತದ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿಯವರು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 5 ನೇ ಸ್ಥಾನವನ್ನು ಪಡೆದಿದ್ದಾರೆ. * ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 1 ನೇ ಸ್ಥಾನವನ್ನು ನ್ಯೂಜಿಲಂಡ್ ತಂಡದ ನಾಯಕನಾಗಿರುವ ಕನೆ ವಿಲಿಯಮ್ಸನ್ ಪಡೆದುಕೊಂಡಿದ್ದಾರೆ. * ಐಸಿಸಿ ಟೆಸ್ಟ್ ರ್ಯಾಂಕಿಂಗ್'ನ ಬೌಲರ್ಗಳ ವಿಭಾಗದಲ್ಲಿ ಆರ್. ಅಶ್ವಿನ್ 2ನೇ ಪಡೆದುಕೊಂಡಿದ್ದಾರೆ, ಮತ್ತು ಪ್ರಥಮ ಸ್ಥಾನವನ್ನು ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್ ಕಮ್ಮಿನ್ಸ್ ಪಡೆದುಕೊಂಡಿದ್ದಾರೆ.