Job Description: * ಪ್ರಸ್ತುತ ಕೇಂದ್ರ ಸರ್ಕಾರವು ಕೇಂದ್ರದ ಭದ್ರತಾ ಸಂಸ್ಥೆಯು ಭದ್ರತೆಗೆ ಒಳಪಡುವ ವ್ಯಕ್ತಿ ಅಪಾಯದ ಮಟ್ಟವನ್ನು ಆಧರಿಸಿ 230 ಜನರಿಗೆ VIP ಭದ್ರತೆಯನ್ನು ನೀಡುತ್ತಿದೆ. * ವ್ಯಕ್ತಿಯ ಭದ್ರತಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ, ಆದರೆ ಕೇಂದ್ರ ಸರ್ಕಾರವು 230 ಜನಗಳ ಭದ್ರತೆಗೆ ಆಗುತ್ತಿರುವ ವೆಚ್ಚದ ಮಾಹಿತಿಯನ್ನು ನೀಡಿಲ್ಲ. * VIP ಭದ್ರತೆಯನ್ನು ನೀಡಲು CRPF ಮತ್ತು CISF ಅಂತಹ ಭದ್ರತಾ ಪಡೆಗಳು ಝಡ್ ಪ್ಲಸ್(Z+), ಝಡ್(Z) ಜೊತೆಗೆ ವೈ(Y) ಶ್ರೇಣಿಯ ಭದ್ರತೆಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಜಿ. ಕಿಶನ್ ರೆಡ್ಡಿಯವರು ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. * ಕೇಂದ್ರ ಸರ್ಕಾರವು ನೀಡುವ ಝಡ್ ಪ್ಲಸ್(Z+)ಭದ್ರತೆಯು ಉನ್ನತ ಶ್ರೇಣಿಯ ಭದ್ರತೆಯಾಗಿದೆ, ಈ ಝಡ್ ಪ್ಲಸ್ ಭದ್ರತಾ ಪಡೆಯಲ್ಲಿ 22 ರಿಂದ 30 ಕಮಾಂಡೊಗಳುನ್ನು ಹೊಂದಿರುತ್ತದೆ. * ಝಡ್ ಶ್ರೇಣಿಯ ಭದ್ರತಾ ಪಡೆಯಲ್ಲಿ 15 ರಿಂದ 18 ಮಂದಿ ಸಿಬ್ಬಂದಿಗಳನ್ನೂ ಹೊಂದಿರುತ್ತದೆ. * ಕೇಂದ್ರ ಸರ್ಕಾರ ನೀಡುವ VIP ಭದ್ರತೆಯಲ್ಲಿ ವೈ+ ಮತ್ತು ವೈ ಕೊನೆಯ ಭದ್ರತಾ ಶ್ರೇಣಿಗಳು, ವೈಪ್ಲಸ್ (y+)ನಲ್ಲಿ 8 ರಿಂದ 12 ಕಮಾಂಡೊಗಳು ಹಾಗೂ ವೈ(Y)ಶ್ರೇಣಿಯಲ್ಲಿ 6 ರಿಂದ 10 ಕಮಾಂಡೊಗಳು ಭದ್ರತೆ ನೀಡುತ್ತಾರೆ. * ಪ್ರಸ್ತುತ ಕೇಂದ್ರ ಸರ್ಕಾರ ನೀಡುವ ಈ ಭದ್ರತೆಯನ್ನು ಮುಂದುವರೆಸುವುದು, ವಾಪಸ್ ಪಡೆಯುವುದು ಅಥವಾ ಬದಲಾವಣೆ ಮಾಡುವುದು ವ್ಯಕ್ತಿಗಿರುವ ಅಪಾಯದ ಮಟ್ಟವನ್ನು ಪರಿಗಣಿಸಿ ನಿರ್ಧಾರ ತಗೆದುಕೊಳ್ಳಗಾಗುತ್ತದೆ.