Job Description: * ಮಾರ್ಚ್ 12ರಂದು ಮೊದಲ 'ಕ್ವಾಡ್' ಸಮ್ಮೇಳನವು ಭಾರತ ಆಸ್ಟ್ರೇಲಿಯಾ ಜಪಾನ್ ಮತ್ತು ಅಮೇರಿಕಾ ಈ ನಾಲ್ಕು ದೇಶಗಳ ನಡುವೆ ನಡೆಯಲಿದೆ. * ಈ ಕ್ವಾಡ್ ಸಮ್ಮೇಳನ ಕಾರ್ಯಯೋಜನೆ ಚೌಕಟ್ಟಿನ ಕುರಿತಾದ ನಾಯಕರ ಮೊದಲ ಸಭೆಯಾಗಿದೆ. * ಪ್ರಸ್ತುತ ಮಾರ್ಚ್-12ರಂದು ನಡೆಯಲಿರುವ ಕ್ವಾಡ್ ಸಮ್ಮೇಳನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಹಾಗೂ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ವಿಡಿಯೋ ಕಾನ್ಫರನ್ಸ್ ಮೂಲಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. * ಈ 'ಕ್ವಾಡ್' ಸಮ್ಮೇಳನದಲ್ಲಿ 4 ದೇಶಗಳ ನಾಯಕರು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿಭಾಯಿಸು ಕುರಿತಾದ ಸಹಕಾರದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಸಮುದ್ರತೀರ ಭದ್ರತೆ ಮತ್ತು ನೈಸರ್ಗಿಕ ವಿಕೋಪಗಳು, ಜೊತೆಗೆ ಹವಾಮಾನಗಳ ಮಾಹಿತಿ ಹೀಗೆ ಹಲವು ಸವಾಲುಗಳ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗುವದು. * ಇನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಲಸಿಕೆಗಳನ್ನು ಕಡಿಮೆ ದರದಲ್ಲಿ ತಯಾರಿಸಲು ಈ 4 ರಾಷ್ಟ್ರಗಳು ಪಾಲುದಾರಿಕೆ ನೀಡಲಿವೆ.