Job Description: * ಉತ್ತರಾಖಂಡದಲ್ಲಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಇತ್ತೀಚಿಗೆ ರಾಜೀನಾಮೆ ನೀಡಿದರು. * ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್'ರವರು ಬಿಜೆಪಿ ವರಿಷ್ಠರ ನಿರ್ದೇಶನದ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ, ಹಾಗೂ ಈ ರಾಜಿನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. * ಉತ್ತರಾಖಂಡ ರಾಜ್ಯದಲ್ಲಿ ಪಕ್ಷದ ನಾಯಕರ ಜತೆಗೆ ಸಂಪರ್ಕ ಕಳೆದುಕೊಂಡಿರುವ ಆರೋಪದಿಂದಾಗಿ ರಾವತ್'ರವರು ಬಿಜೆಪಿ ವರಿಷ್ಠರ ನಿರ್ದೇಶನದ ಮೇರೆಗೆ ರಾಜೀನಾಮೆ ನೀಡಿದ್ದಾರೆ. * ತ್ರಿವೇಂದ್ರ ಸಿಂಗ್ ರಾವತ್ 18 ಮಾರ್ಚ್ 2017 ರಿಂದ 2021 ಮಾರ್ಚ್ 9 ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಉತ್ತರಾಖಂಡದ ಬಗ್ಗೆ ಮಾಹಿತಿ : * 2000ರಲ್ಲಿ ಉತ್ತರಾಖಂಡ್ ರಾಜ್ಯವು ರಚನೆಯಾಗಿದೆ. * ಉತ್ತರಾಖಂಡವು ಇದು ಹಿಂದೂ ಯಾತ್ರಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. * ರಾಜ್ಯದ ಅರಣ್ಯದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಮತ್ತು ಇತರ ಸ್ಥಳೀಯ ವನ್ಯಜೀವಿಗಳಿಗೆ ಆಶ್ರಯ ನೀಡುತ್ತದೆ * ಉತ್ತರಾಖಂಡದ ರಾಜ್ಯಪಾಲ: ಬೇಬಿ ರಾಣಿ ಮೌರ್ಯ ಟ್ರೆಂಡಿಂಗ್ * 2012ರ ಜನಗತಿ ಪ್ರಕಾರ ಜನಸಂಖ್ಯೆ 1.01 ಕೋಟಿ * ಉತ್ತರಾಖಂಡದ ಅಧಿಕೃತ ಪ್ರಾಣಿ ಆಲ್ಪೈನ್ ಕಸ್ತೂರಿ ಜಿಂಕೆ ತ್ರಿವೇಂದ್ರ ಸಿಂಗ್ ರಾವತ್ ರವರ ಬಗ್ಗೆ ಮಾಹಿತಿ : * ತ್ರಿವೇಂದ್ರ ಸಿಂಗ್ ರಾವತ್ ಅವರು 20 ಡಿಸೆಂಬರ್ 1960 ಜನಿಸಿದರು, ಇವರು 2017 ಮತ್ತು 2021 ರ ನಡುವೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. * ಭಾರತೀಯ ಜನತಾ ಪಕ್ಷದ ಪ್ರಮುಖ ರಾಜಕಾರಣಿಯಾಗಿದ್ದರೆ.