Job Description: * ರಾಷ್ಟ್ರ ರಾಜ್ಯಧಾನಿ ದೆಹಲಿ ಇದೀಗ ತನ್ನದೇ ಆದ ಪ್ರತ್ಯೇಕ ಶಿಕ್ಷಣ ಮಂಡಳಿಯನ್ನ ಹೊಂದಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್'ರವರು ಇತ್ತೀಚಿಗೆ ಘೋಷಿಸಿದ್ದಾರೆ. * ಪ್ರಸ್ತುತ ಇದೀಗ ದೆಹಲಿಯಲ್ಲಿ ಸಿಬಿಎಸ್ಇ / ಐಸಿಎಸ್ಇ ಎಂಬ ಶಿಕ್ಷಣ ಮಂಡಳಿಗಳು ಇವೆ. * ದೆಹಲಿಯಲ್ಲಿ ತನ್ನದೇ ಆದ ಶಿಕ್ಷಣ ಮಂಡಳಿಯನ್ನು ರಚಿಸಲು ಅರವಿಂದ್ ಕೇಜ್ರಿವಾಲ್ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದಿದೆ. * ಇನ್ನು 2021-22 ರಿಂದ ಕೆಲವು ಶಾಲೆಗಳು ಹೊಸ ಮಂಡಳಿ ಅಡಿಯಲ್ಲಿ ಅಧ್ಯಯನ ಮಾಡಲಿರುವುದಾಗಿ ಕೇಜ್ರಿವಾಲ್ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ. * ದೆಹಲಿ ಸರ್ಕಾರವು 1,000 ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದ್ದು, ಇವೆಲ್ಲವೂ ಪ್ರಸ್ತುತ ಸಿಬಿಎಸ್ಇಗೆ ಸಂಯೋಜಿತವಾಗಿದ್ದು, ದೆಹಲಿಯ 2020 ರ ವಾರ್ಷಿಕ ಬಜೆಟ್ ಮಂಡಿಸುವಾಗ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪ್ರತ್ಯೇಕ ರಾಜ್ಯ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲು 62 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ.