Job Description: * ಭಾರತವು ಸ್ವಾತಂತ್ರ್ಯ ಪಡೆದು ಬರುವ ವರ್ಷ ಅಂದರೆ 2022ಕ್ಕೆ 75 ವರ್ಷ ಪೂರ್ಣಗೊಳಿಸುತ್ತಿರುವ ಈ ಹಿನ್ನಲೆ 75ನೇ ಸ್ವಾತಂತ್ರ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. * ಈ ಐತಿಹಾಸಿಕ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಲು ಕೇಂದ್ರ ಸರಕಾರವು ಒಟ್ಟು 259 ಗಣ್ಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿಯಲ್ಲಿ ಕೇಂದ್ರ ಸಚಿವರು, ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಖ್ಯಾತ ಕಲಾವಿದರು ಸದಸ್ಯರನ್ನಾಗಿ ಮಾಡಲಾಗಿದೆ. ಈ ಸಮಿತಿಯ ದೇಶದ ಹಲವು ಪ್ರಮುಖರನ್ನು ಒಳಗೊಂಡಿದೆ: * ಈ ಸಮಿತಿಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿಕೊಳ್ಳಲಿದ್ದಾರೆ, ಮತ್ತು ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ದೆ, ರಂಜನ್ ಗೋಗೊಯ್, ಕೆ. ಪರಾಶರನ್, ಸೋಲಿ ಸೊರಾಬ್ಜಿ ಅವರಿಗೂ ಸ್ಥಾನ ನೀಡಲಾಗಿದೆ, ಇದರ ಜೊತೆಯಲ್ಲಿ ಕೇಂದ್ರ ಸಚಿವರು ಮತ್ತು ಎಲ್ಲ ರಾಜ್ಯಗಳ ರಾಜ್ಯಪಾಲರು- ಮುಖ್ಯಮಂತ್ರಿಗಳು, ರಾಜಕೀಯ ಧುರೀಣರೂ ಕೂಡ ಈ ಸಮಿತಿಯಲ್ಲಿ ಇರಲಿದ್ದಾರೆ. ಈ ಸಮಿತಿಯಲ್ಲಿ ಸ್ಥಾನ ಪಡೆದ ಕನ್ನಡಿಗರು : * ಮಾಜಿ ಪ್ರಧಾನಿ ದೇವೇಗೌಡ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಕ್ರೀಡಾ ಪಟುಗಳಾದ ಪ್ರಕಾಶ್ ಪಡುಕೋಣೆ, ರಾಹುಲ್ ದ್ರಾವಿಡ್, ಅಧ್ಯಾತ್ಮ ಕ್ಷೇತ್ರದಿಂದ ಶ್ರೀ ರವಿಶಂಕರ್ ಗುರೂಜಿ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹೀಗೆ ಹಲವು ಗಣ್ಯರು ಸ್ಥಾನ ಪಡೆದುಕೊಂಡಿದ್ದಾರೆ.