Job Description: ನವದೆಹಲಿ : ಭಾರತ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಆಯೋಜಿಸಿರುವ 'ಮ್ಯಾರಿಟೈಮ್ ಇಂಡಿಯಾ ಸಮ್ಮಿಟ್' ಇದೆ ಮಾರ್ಚ್ 02 ರಿಂದ 04ನೇ ತಾರೀಖಿನವರೆಗೆ ನಡೆಯಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. * ಉದ್ಘಾಟನಾ ಸಮಾರಂಭ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವುದಾಗಿ ಪಿಎಂ ಸಚಿವಾಲಯ ತಿಳಿಸಿದೆ. * ಈ ಶೃಂಗಸಭೆಯು ಮೂಲಕ ಬರುವ ದಶಕದಲ್ಲಿ ಭಾರತದ ಕಡಲ ಕ್ಷೇತ್ರಕ್ಕೆ ಮಾರ್ಗಸೂಚಿಯನ್ನು ತೋರಲಿದ್ದು, ಜಾಗತಿಕ ಕಡಲ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಗೆ ತರವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ. * ಇನ್ನು ಈ ಮೂರು ದಿನಗಳ ಕಾಲ ನಡೆಯುವ ಈ ಶೃಂಗಸಭೆಯಲ್ಲಿ ಡೆನ್ಮಾರ್ಕ್ ದೇಶ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ.