Job Description: ಇದೆ ಮಾರ್ಚ್ 01 ರಿಂದ ದೇಶಾದ್ಯಂತ 10 ಕೋಟಿ ಜನರಿಗೆ ಲಸಿಕೆ ಹಾಕುವ 'ಕೋವಿಡ್ -19' ಲಸಿಕೆ ಅಭಿಯಾನ ಎರಡನೇ ಹಂತದ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದರು. * 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟ ನಿರ್ದಿಷ್ಟ ಸಹ-ರೋಗಲಕ್ಷಣಗಳನ್ನು ಹೊಂದಿರುವವರಿಗೆ ಲಸಿಕೆ ಯನ್ನು ಸರ್ಕಾರ ಉಚಿತವಾಗಿ ನೀಡಲಿದೆ. * ಲಸಿಕೆ ಪಡೆಯಬಯಸುವ ಫಲಾನುಭವಿಗಳು ಕೇಂದ್ರ ಸರ್ಕಾರ ಆರಂಭಿಸಿರುವ ಕೋ-ವಿನ್ ವೇದಿಕೆಯಲ್ಲಿ(CoWIN) ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ. * ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಯನ್ನು ಉಚಿತವಾಗಿ ಹಾಗು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗೆ 150 ರೂಪಾಯಿ ಹಾಗು ಸೇವಾ ಶುಲ್ಕ 100 ರೂ.ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.