Job Description: * ಇಸ್ರೋ ಮುಖ್ಯಸ್ಥ ಕೆ.ಶಿವನ್ ರವರು 2022ರಲ್ಲಿ ಭಾರತದ ಬಹುನಿರೀಕ್ಷಿತ 'ಚಂದ್ರಯಾನ-3' ಯೋಜನೆಯು ಕಾರ್ಯಗತಗೊಳ್ಳಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. * ಚಂದ್ರಯಾನ-3 ಯೋಜನೆಯು 2020ರ ವರ್ಷದ ಅಂತ್ಯದಲ್ಲಿ ಕಾರ್ಯ ಯಶಸ್ಸ್ವಿಗೊಳ್ಳಬೇಕಾಗಿತ್ತು ಆದರೆ ಕೋವಿಡ್-19 ಕಾರಣದಿಂದಾಗಿ ಕಾರ್ಯಗತಗೊಂಡಿಲ್ಲ ಎಂದು ತಿಳಿಸಿದ್ದಾರೆ. ಚಂದ್ರಯಾನ-3 ಮಾಹಿತಿ: * ಚಂದ್ರಯಾನ-3 ನೌಕೆಯ ಬಹುತೇಕ ಚಂದ್ರಯಾನ-2ರ ಹಾಗೆಯೆ ಇರಲಿದೆ, ಆದರೆ ಚಂದ್ರಯಾನ-2ರಲ್ಲಿ ಉಡಾವಣೆ ಮಾಡಲಾಗಿದ್ದ ಕಕ್ಷೆಗಾಮಿಯನ್ನೇ ಬಳಕೆ ಮಾಡಲಾಗುವುದು, ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ನೌಕೆಯನ್ನು ಇಳಿಸುವ ಗುರಿ ಇಸ್ರೋ ಹೊಂದಿದೆ, ಒಟ್ಟಾರೆ ಈ ಯೋಜನೆಯು 2022ರಲ್ಲಿ ಕಾರ್ಯಗತಗೊಳ್ಳುವ ಭರವಸೆ ಇದೆ ಎಂದು ಶಿವನ್ ಮಾಹಿತಿ ನೀಡಿದ್ದಾರೆ. * ಚಂದ್ರಯಾನ - 3 ಯೋಜನೆಯನ್ನು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಕಾರ್ಯಗತಗೊಳಿಸುವ ಉದ್ದೇಶವಿದೆ, ಹಾಗೂ ಇದರಲ್ಲಿ 3 ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು ಇಸ್ರೋ ಹೊಂದಿದೆ.