Job Description: * ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟ ಪ್ರಶಸ್ತಿಯನ್ನು ನೋವಾಕ್ ಜೋಕೋವಿಚ್ ಪಡೆದುಕೊಂಡಿದ್ದಾರೆ, ಇದು ನೋವಾಕ್ ಜೋಕೋವಿಚ್ ರವರ 18 ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯಾಗಿದೆ. * ಇತ್ತೀಚಿಗೆ ಮೆಲ್ಬೋರ್ನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ 'ಡೇನಿಯಲ್ ಮೆಡ್ ವೆ ದೇವ್' ಅವರನ್ನು 7-5, 6-2, 6-2 ಸೆಟ್ ಅಂತರದಿಂದ ಸೋಲಿಸಿ ಜೋಕೋವಿಚ್' ರವರು ಪ್ರಶಸ್ತಿ ಪಡೆದುಕೊಂಡರು. * ಅಂತಿಮ ಪಂದ್ಯದಲ್ಲಿ ರಷ್ಯಾದ ಪ್ರತಿಸ್ಪರ್ಧಿ ಆಟಗಾರರಾದ 25 ವರ್ಷದ ಡೇನಿಯಲ್ ಮೆಡ್ ವೆ ದೇವ್ ಅವರಿಂದ ತೀವ್ರ ಪೈಪೋಟಿ ನೀಡಿದ್ದರು, ಆದರೆ ಅಂತಿಮ ವಾಗಿ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಳ್ಳುವ 33 ವರ್ಷದ ನೊವಾಕ್ ಜೋಕೋವಿಚ್ ಎದುರು ಸೋಲನ್ನು ಒಪ್ಪಿಕೊಂಡರು. ಹೆಚ್ಚಿನ ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಪಡೆದವರು: - ರೋಜರ್ ಫೆಡರರ್ - 20 - ರಾಫೆಲ್ ನಡಾಲ್ - 20 - ನೊವಾಕ್ ಜೊಕೊವಿಕ್ - 18 - ಪೀಟ್ ಸಂಪ್ರಾಸ್ - 14 - ರಾಯ್ ಎಮರ್ಸನ್ - 12