Job Description: * ಪ್ರಸಕ್ತ ವರ್ಷದ “ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ" ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ, ಹಾಗೂ ನಟರಾದ ಅಕ್ಷಯ್ ಕುಮಾರ್, ಸುಶ್ಮಿತಾ ಸೇನ್, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಲಭಿಸಿದೆ. * ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ. * ಹಾರರ್ ಹಾಗೂ ಕಾಮಿಡಿ ಸನ್ನಿವೇಶಗಳನ್ನು ಒಳಗೊಂಡಿರುವ 'ಲಕ್ಷ್ಮಿ’ ಚಿತ್ರದ ನಟನೆಗಾಗಿ ಸ್ಟಾರ್ ನಟ ಅಕ್ಷಯ್ ಕುಮಾರ್ಗೆ 'ಉತ್ತಮ ನಟ’ ಪ್ರಶಸ್ತಿ ಲಭಿಸಿದೆ. * 'ಚಿಚೋರೆ' ಚಿತ್ರದ ಅಭಿನಯಕ್ಕಾಗಿ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮರಣೋತ್ತರವಾಗಿ “ವಿಮರ್ಶಕರ ಉತ್ತಮ ನಟ’ ಪ್ರಶಸ್ತಿ ಲಭಿಸಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದವರ ವಿವರ: ಉತ್ತಮ ನಟಿ: ದೀಪಿಕಾ ಪಡುಕೋಣೆ - ಚಪಾಕ್ ಚಿತ್ರಕ್ಕಾಗಿ ಉತ್ತಮ ನಟ: ಅಕ್ಷಯ್ ಕುಮಾರ್ - ಲಕ್ಷ್ಮಿ ಚಿತ್ರಕ್ಕಾಗಿ ವಿಮರ್ಶಕರ ಉತ್ತಮ ನಟಿ: ಕಿಯಾರಾ ಅಡ್ವಾಣಿ - ಗಿಲ್ಟಿ ಚಿತ್ರಕ್ಕಾಗಿ ವಿಮರ್ಶಕರ ಉತ್ತಮ ನಟ: ಸುಶಾಂತ್ ಸಿಂಗ್ ರಜಪೂತ್ - ಚಿಚೋರೆ ಚಿತ್ರಕ್ಕಾಗಿ ಉತ್ತಮ ಚಿತ್ರ: ತಾನಾಜಿ ಉತ್ತಮ ವಿದೇಶಿ ಫೀಚರ್ ಚಿತ್ರ: ಪ್ಯಾರಾಸೈಟ್ ಉತ್ತಮ ನಿರ್ದೇಶಕ: ಅನುರಾಗ್ ಬಸು - ಲುಡೋ ಚಿತ್ರಕ್ಕಾಗಿ