Job Description: * ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾರ್ವಜನಿಕರ ಬಳಕೆಗಾಗಿ E-Lost Report App ಅನ್ನು ಪರಿಚಯಿಸಿದೆ, ಈ ಆಪ್'ನ ಮುಖಾಂತರ ದೂರು ನೀಡಬಹುದಾಗಿದೆ ಸಾಮಾನ್ಯ ಜನರು ವಸ್ತುಗಳನ್ನು ಕಳೆದುಕೊಂಡಲ್ಲಿ ಪೊಲೀಸ್ ಠಾಣೆಗೆ ನೇರವಾಗಿ ಭೇಟಿ ನೀಡದೆ ಇರುವ ಸಂದರ್ಭದಲ್ಲಿ ಈ ಆಪ್'ನ ಮೂಲಕ ದೂರು ಸಲ್ಲಿಸಬಹುದಾಗಿದೆ. * E-Lost Report App ಮೂಲಕ ಸಾಮಾನ್ಯ ಜನರ ಬಳಕೆ ಮಾಡುವ ವಸ್ತುಗಳನ್ನು ಕಳೆದುಕೊಂಡಲ್ಲಿ ಸಾರ್ವಜನಿಕರು ಮಾಹಿತಿ ಭರ್ತಿ ಮಾಡುವ ಮೂಲಕ ದೂರು ಸಲ್ಲಿಸಿ ತಕ್ಷಣವೇ ಸ್ವೀಕೃತಿ ಪಡೆದುಕೊಳ್ಳಬಹುದಾಗಿದೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚೆಕ್, ಡಿಡಿ, ಐಡೆಂಟಿಟಿ ಕಾರ್ಡ್, ಐಪ್ಯಾಡ್, ಟ್ಯಾಬ್ಲೆಟ್, ಮೊಬೈಲ್, ಪಾನ್ ಕಾರ್ಡ್, ಪಾಸ್ ಬುಕ್, ಪಾಸ್ಪೋರ್ಟ್, ರೇಷನ್ ಕಾರ್ಡ್, ವಿಡಿಯೋ ಕ್ಯಾಮೆರಾ ಎಜುಕೇಷನಲ್ ಸರ್ಟಿಫಿಕೇಟ್, ವೋಟರ್ ಐಡಿ ಕಾರ್ಡ್ ಕಳೆದುಕೊಂಡಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡದೆ ನೇರವಾಗಿ ಈ ಆಪ್'ನ ಮೂಲಕ ದೂರುಗಳನ್ನೂ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.