Job Description: * 2020ರಲ್ಲಿ ಸಾಂಕ್ರಾಮಿಕ ರೋಗ ಕೋವಿಡ್-19 ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್ಡೌನ್'ನಿಂದಾಗಿ ಭೂಮಿಯು ದಶಕಗಳಲ್ಲೇ ಮೊದಲ ಬಾರಿಗೆ ಅಂದರೆ 2020ರಲ್ಲಿ ಅತ್ಯಂತ ಮೌನದ ಅವಧಿಯನ್ನು ಕಳೆಯಿತು ಎಂದು ಬೆಲ್ಜಿಯಮ್ನ ರಾಯಲ್ ಅಬ್ಸರ್ವೇಟರಿಯ ಥಾಮಸ್ ಲೆಕಾಕ್ ನೇತೃತ್ವದ ವಿಜ್ಞಾನಿಗಳು ತಂಡವು ಮಾಹಿತಿಯನ್ನು ನೀಡಿದ್ದಾರೆ. * ಲಾಕ್ ಡೌನ್ ಸಮಯಗಳಲ್ಲಿ ಶೇಕಡಾ 50ರಷ್ಟು ಕಾರ್ಖಾನೆಗಳು ಹಾಗೂ ಕಂಪನಿಗಳು ಮುಚ್ಚಿದವು, ಪ್ರಸ್ತುತ 33 ದೇಶಗಳ ಭೂ ವಿಜ್ಞಾನಿಗಳ ತಂಡವು ಜಗತ್ತಿನಾದ್ಯಂತ ಇರುವ ಭೂಕಂಪನ ಅಳೆಯುವ ಕೇಂದ್ರಗಳ ಪೈಕಿ 268 ಕೇಂದ್ರಗಳ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದ್ದಾರೆ, ಭೂ ವಿಜ್ಞಾನಿಗಳ ವಿಶ್ಲೇಷಣೆ ಪ್ರಕಾರ 185 ಕೇಂದ್ರಗಳಲ್ಲಿ ಶಬ್ದದ ಮಟ್ಟವು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ, ಇದರಿಂದ ಭೂಮಿಯು 2020ರಲ್ಲಿ ಮೌನವಾಗಿತ್ತು ಎಂದು ತಿಳಿಸಿದ್ದಾರೆ.