Job Description: ವಾಷಿಂಗ್ಟನ್ : ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ವು ಮಂಗಳ ಗ್ರಹಕ್ಕೆ ಉಡಾವಣೆಗೊಳಿಸಿದ್ದ ನೌಕೆಯು ಸುಮಾರು 203 ದಿನಗಳ ಬಾಹ್ಯಾಕಾಶ ಪ್ರಯಾಣದ ನಂತರ ದಿನಾಂಕ 18 ಫೆಬ್ರುವರಿ 2021 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಇಳಿಯಿತು. ಅತಿ ದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದ ಮೇಲೆ ಜೀವಿಗಳ ಅಸ್ತಿತ್ವದ ಕುರಿತು ಮಹತ್ವದ ಅಧ್ಯಯನ ಮಾಡಲಿದೆ. ಈ ರೋವರ್ ನ ಕೆಲಸ : ಈ ರೋವರ್ ನೌಕೆಯು ಸುಮಾರು ಏಳು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಓಡಾಟ ನಡೆಸಿ, ಇಲ್ಲಿ ಜೀವಿಗಳ ಅಸ್ತಿತ್ವದ ಕುರಿತ ಸಂಶೋಧನೆ ನಡೆಸಲಿದೆ. * 30 ಕಲ್ಲುಗಳು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ 2030ರ ವೇಳೆಗೆ ಭೂಮಿಗೆ ಕಳುಹಿಸಲಿದೆ. * ಈ ನೌಕೆಯು ಸುಮಾರು ಒಂದು ಟನ್ ತೂಕವಿದ್ದು, ಇದರಲ್ಲಿ ಏಳು ಅಡಿ ಎತ್ತರದ ರೊಬೊಟಿಕ್ ಕ್ಯಾಮೆರಾ, 19 ಕ್ಯಾಮೆರಾಗಳು, ಎರಡು ಮೈಕ್ರೋಫೋನ್ಗಳು ಸೇರಿ ವಿವಿಧ ಸಾಧನಗಳನ್ನು ಅಳವಡಿಸಲಾಗಿದೆ. * ಇನ್ನು ಮಂಗಳ ಗ್ರಹಕ್ಕೆ ಕಾಲಿಟ್ಟ ಕೂಡಲೇ ಈ ನೌಕೆಯು ಇಲ್ಲಿನ ಎರಡು ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ರವಾನಿಸಿದೆ ಎಂದು ನಾಸಾ ತಿಳಿಸಿದೆ.