Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸದಾಗಿ 20 ರೂ. ಮುಖಬೆಲೆಯ ನಾಣ್ಯ ಚಲಾವಣೆಗೆ ಸಮ್ಮತಿಯನ್ನು ನೀಡಿದೆ, ಸದ್ಯ RBIನಿಂದ 20 ರೂ. ಮುಖಬೆಲೆಯ ನಾಣ್ಯಗಳನ್ನು ಪ್ರಾದೇಶಿಕ ಕಚೇರಿಗಳ ಮೂಲಕ ಬ್ಯಾಂಕ್'ಗಳಿಗೆ ಜನರ ಬಳಕೆಗಾಗಿ ರವಾನಿಸಲಾಗುತ್ತಿದೆ. * ಈ 20 ರೂ. ಮುಖಬೆಲೆಯ ನಾಣ್ಯಗಳು 2020ರ ಏಪ್ರಿಲ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಬರಬೇಕಿತ್ತು ಆದರೆ ಕೋವಿಡ್-19 ಸಾಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ಜಾರಿಯಾಗಿದ್ದರಿಂದ ನಾಣ್ಯಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು, ಪ್ರಸ್ತುತ ಕರ್ನಾಟಕ ರಾಜ್ಯ ಸೇರಿ ದೇಶದ ಬಹುತೇಕ ಪ್ರದೇಶಗಳಲ್ಲಿ ಈ ನಾಣ್ಯಗಳು ಚಲಾವಣೆಗೆ ಬರಲಿವೆ, ಹಾಗೂ ಇದರಿಂದ ಚಿಲ್ಲರೆ ಪರಿಸ್ಥಿತಿಯನ್ನು ಸರಿದೂಗಿಸಲು ಅನುಕೂಲವಾಗುತ್ತದೆ ಎಂದು RBI ಅಭಿಪ್ರಾಯಪಟ್ಟಿದೆ. ಈ ನಾಣ್ಯದ ಮಾಹಿತಿ: * RBIನಿಂದ ಬಿಡುಗಡೆಗೊಂಡಿರುವ 20 ರೂ. ಮುಖಬೆಲೆಯ ನಾಣ್ಯವು 8.54 ಗ್ರಾಂ ತೂಕವಿದೆ, ಈ ನಾಣ್ಯವನ್ನು ನಿಕ್ಕಲ್, ಸತು ಹಾಗೂ ತಾಮ್ರವನ್ನು ಬಳಸಿ ತಯಾರಿಸಲಾಗಿದೆ ಎಂದು ಮಾಹಿತಿಯಿದೆ. * RBIನಿಂದ ಬಿಡುಗಡೆಗೊಂಡಿರುವ ಈ 20 ರೂ. ಮುಖಬೆಲೆಯ ನಾಣ್ಯವೂ ಕಾನೂನು ಪ್ರಕಾರ ಪ್ರಸ್ತುತ ದೇಶದಲ್ಲಿ ಚಲಾವಣೆಯಲ್ಲಿರುವ ಎಲ್ಲಾ ನಾಣ್ಯಗಳು ಹಾಗೂ ನೋಟುಗಳಿಗೆ ಇರುವ ಬೆಲೆಯನ್ನು ಈ ನಾಣ್ಯ ಕೂಡ ಹೊಂದಿದೆ ಎಂದು RBI ತಿಳಿಸಿದೆ. * ಈ ಹಿಂದೆ RBIನಿಂದ 10 ರೂ. ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿತ್ತು, ಆದರೆ ಕೆಲ ಸುಳ್ಳು ಸುದ್ದಿಗಳಿಂದ ಆ ನಾಣ್ಯದ ಬಳಕೆಯಾಗುತಿಲ್ಲ ಎಂದು RBI ಆರೋಪ ಮಾಡಿತ್ತು ಇನ್ನು ಮುಂದೆ ಸುಳ್ಳು ಸುದ್ದಿ ಹರಡಿದ ವ್ಯಕ್ತಿಗಳ ವಿರುದ್ಧ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು RBI ತಿಳಿಸಿದೆ. * ಪ್ರಸ್ತುತ RBI ಬಿಡುಗಡೆ ಮಾಡಿರುವ 10 ರೂ. ಹಾಗೂ 20 ರೂ. ಮುಖ ಬೆಲೆಯ ನಾಣ್ಯಗಳು ಚಲಾವಣೆಯಲ್ಲಿ ಇರಲಿವೆ ಎಂದು ತಿಳಿಸಲಾಗಿದೆ, ಹೆಚ್ಚಿನ ವಿವರಗಳಿಗಾಗಿ ಆರ್ಬಿಐ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.