Job Description: * ಇತ್ತೀಚೆಗೆ ಮಹಿಳಾ ಕಂಡಕ್ಟರ್'ಗಳು ತಮ್ಮ ಕೆಲಸದ ಕಷ್ಟಕರ ಸನ್ನಿವೇಶಗಳ ಬಗ್ಗೆ ವಿಡಿಯೋವನ್ನು ಮಾಡಿದ್ದರು ಅಲ್ಲದೇ ಕೆಲಸದ ಸಮಯವನ್ನು ಕಡಿಮೆ ಮಾಡುವಂತೆ ಮನವಿಯನ್ನು ಕೂಡ ಮಾಡಿದ್ದರು. ಈ ಮಹಿಳಾ ಕಂಡಕ್ಟರ್'ಗಳ ಮನವಿಗೆ ಬಿಎಂಟಿಸಿ ಸ್ಪಂದಿಸಿ ಇದೀಗ ಮಹಿಳಾ ಕಂಡಕ್ಟರ್'ಗಳಿಗೆ ಶಿಫ್ಟ್ ಹಾಕಲು ತೀರ್ಮಾನಿಸಿದೆ ಎಂದು BMTC ತಿಳಿಸಿದೆ. * ಇದೀಗ ಮಹಿಳಾ ಕಂಡಕ್ಟರ್'ಗಳಿಗೆ ಮಾರ್ನಿಂಗ್ ಹಾಗೂ ಜನರಲ್ ಶಿಫ್ಟ್ ನೀಡಲಾಗುವದು ಮತ್ತು ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗಳು ತಮಗೆ ಅನುಕೂಲವಾಗುವ ಶಿಫ್ಟ್'ಗೆ ಕೆಲಸಕ್ಕೆ ಬರಲು BMTC ತಿಳಿಸಿದೆ.