Job Description: * ಭಾರತೀಯ ವಾಯುಸೇನೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳುನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ವಾಯುಸೇನೆಯ ಅಧಿಕಾರಿಗಳು ಇತ್ತೀಚಿಗೆ ತಿಳಿಸಿದ್ದಾರೆ. * ಈ ಮುಧೋಳ ತಳಿಯ ನಾಯಿಗಳುನ್ನು ಮುಧೋಳ ಹೌಂಡ್, ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ. * ಪ್ರಸ್ತುತ ಮುಧೋಳ ತಳಿಯ 6 ನಾಯಿಗಳ ಬೇಡಿಕೆಯನ್ನು ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಘಟಕವು ಬಾಗಲಕೋಟ ಜಿಲ್ಲೆಯ ಮುಧೋಳ ಶ್ವಾನ ಸಂವರ್ಧನೆ ಕೇಂದ್ರಕ್ಕೆ ಬೇಡಿಕೆಇಟ್ಟಿದ್ದು, ಪ್ರಸ್ತುತ ಇದೀಗ 4 ನಾಯಿ ಮರಿಗಳನ್ನು ಅಧಿಕೃತವಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಇನ್ನು 2 ನಾಯಿ ಮರಿಗಳನ್ನು ಮುಂದಿನ ವರ್ಷ ಆಗ್ರಾದ ಏರ್ ಫೋರ್ಸ್ ಘಟಕಕ್ಕೆ ನೀಡುವುದಾಗಿ ಮುಧೋಳ ಶ್ವಾನ ಸಂವರ್ಧನೆ ಕೇಂದ್ರ ತಿಳಿಸಿದೆ. * ಈಗಾಗಲೇ ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳು ಭಾರತೀಯ ಭೂಸೇನೆ ಮತ್ತು CRPFನಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.