Job Description: * ಇತ್ತೀಚಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಭಾರತದ ಮೊದಲ ಸಿಎನ್ಜಿ (CNG) ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದರು. ಏನಿದು 'CNG' (Compressed Natural Gas) ಟ್ರ್ಯಾಕ್ಟರ್ʼ : * ಸಿಎನ್ಜಿ ಟ್ರಾಕ್ಟರುಗಳು ಡೀಸೆಲ್ ಟ್ರ್ಯಾಕ್ಟರ್'ಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿರುತ್ತವೆ, ಮತ್ತು ಇವುಗಳು ಡೀಸೆಲ್ ಟ್ರ್ಯಾಕ್ಟರ್'ಗಳಿಗಿಂತ ಕಡಿಮೆ ದರದಲ್ಲಿ ರೈತರ ದೊರೆಯುತ್ತವೆ ಹಾಗೂ ರೈತರ ಉಳಿತಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. * ಈ ಸಂಕುಚಿತ ನೈಸರ್ಗಿಕ ಅನಿಲ (CNG) ಟ್ರ್ಯಾಕ್ಟರ್ ಗಳನ್ನು ರಾವ್ಮಾಟ್ ಟೆಕ್ನೋ ಸೊಲ್ಯೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಸಂಯೋಜಿಸಿವೆ. * ಈ ಸಿಎನ್ಜಿ ಟ್ರಾಕ್ಟರುಗಳನ್ನು ಬಳಸುವುದರ ಮೂಲಕ ರೈತರು ಇಂಧನ ವೆಚ್ಚದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ರೂ. ಗಳನ್ನೂ ಉಳಿಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾಹಿತಿಯನ್ನು ನೀಡಿದೆ.