Job Description: * ಜಪಾನಿನ ರಾಜಕಾರಣಿಯಾಗಿರುವ ಯೊಶಿರೋ ಮೋರಿ ಅವರು 2020ರ ಒಲಿಂಪಿಕ್ಸ್ ಅಧ್ಯಕ್ಷರು ಇದೀಗ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. * ಈ ಮೊದಲು ಇವರು ಏಪ್ರಿಲ್ 2000 ಮತ್ತು ಏಪ್ರಿಲ್ 2001 ರ ನಡುವೆ ಜಪಾನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. * ಇತ್ತೀಚಿಗೆ ನಡೆದ ಒಲಿಂಪಿಕ್ಸ್ ಸಭೆಯಲ್ಲಿ ಯೊಶಿರೋ ಮೋರಿಯವರು, ಮಹಿಳೆಯರ ಕಾರ್ಯಕ್ರಮಗಳಲ್ಲಿ ಮಾತನಾಡಲು ಅತಿ ಹೆಚ್ಚು ಸಮಯ ತಗೆದುಕೊಳ್ಳುತ್ತಾರೆ ಇದರಿಂದ ಕಾರ್ಯಕ್ರಮದ ಸಮಯ ಹಾಳಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಭೆಯಲ್ಲಿ ನೀಡಿ ವ್ಯಾಪಕವಾಗಿ ಜನರ ಟೀಕೆಗೆ ಗುರಿಯಾಗಿದ್ದರು.