Job Description: * ಆಂಧ್ರಪ್ರದೇಶದ ಮದನಪಲ್ಲಿಯಲ್ಲಿರುವ ಸತ್ಸಂಗ ಫೌಂಡೇಷನ್ ಆಶ್ರಮಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡಿ ಯೋಗ ತರಬೇತಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. * ಪ್ರಸ್ತುತ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿರುವ ಸತ್ಸಂಗ ಫೌಂಡೇಷನ್ ಆಶ್ರಮವು ಆಧ್ಯಾತ್ಮಿಕ ಚಿಂತಕ ಶ್ರೀ ಎಂ ಅವರು ಸ್ಥಾಪಿಸಿರುವ ಆಶ್ರಮವಾಗಿದೆ, ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್'ರವರು ಈ ಆಶ್ರಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಭಾರತ ಯೋಗ ವಿದ್ಯಾಕೇಂದ್ರದ ಯೋಗಶಾಲೆಗೆ ಚಾಲನೆಯನ್ನು ನೀಡಿದರು, ಜೊತೆಗೆ ಸತ್ಸಂಗ ಫೌಂಡೇಷನ್ ವತಿಯಿಂದ ನಿರ್ಮಾಣವಾಗುತ್ತಿರುವ ಸ್ವಾಸ್ಥ್ಯ ಆಸ್ಪತ್ರೆಗೆ ಭೂಮಿಪೂಜೆಯನ್ನು ಕೈಗೊಂಡರು. ಸತ್ಸಂಗ ಆಶ್ರಮದ ಪ್ರಯೋಜನ: * ಈ ಆಶ್ರಮದಲ್ಲಿ ಮೊದಲ ಬಾರಿಗೆ ಯೋಗ ಶಿಕ್ಷಕ ತರಬೇತಿ ವರ್ಗಗಳನ್ನೂ ಪ್ರಾರಂಭಮಾಡಲಾಗಿದೆ, ಹಾಗೂ ಈ ಆಶ್ರಮಕ್ಕೆ ದೇಶದ ವಿವಿಧ ಪ್ರದೇಶಗಳಿಂದ ಯೋಗ ತರಬೇತಿಯನ್ನು ಕಲಿಯಲು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದು ಸತ್ಸಂಗ ಫೌಂಡೇಷನ್ ತಿಳಿಸಿದೆ.