Job Description: * ಭಾರತದ ಸಂಸತ್ ಭವನಕ್ಕೆ ದಿನಾಂಕ 12 ಫೆಬ್ರವರಿ 1921 ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಬ್ರಿಟನ್ನ ಡ್ನೂಕ್ ಆಫ್ ಕನ್ನಾಟ್'ರವರು ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದರು, ಇವರು ಕೆನಡಾದ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು, ಪ್ರಸ್ತುತ ಈ ಭಾರತದ ಸಂಸತ್ ಭವನಕ್ಕೆ 100 ವರ್ಷಗಳ(ಶತಮಾನದ) ಸಂಭ್ರಮಾಚರಣೆ. * ಭಾರತದ ಈ ಸಂಸತ್ ಭವನಕ್ಕೆ ಸರ್ ಹರ್ಬರ್ಟ್ ಬೇಕರ್ ಮತ್ತು ಸರ್ ಎಡ್ವಿನ್ ಲೂಟೆನ್ಸ್'ರವರು ನೀಲ ನಕ್ಷೆಯನ್ನು ವಿನ್ಯಾಸಗೊಳಿಸಿದ್ದರು, ಇವರ ಮಾರ್ಗದ ಅನುಸಾರ ಬ್ರಿಟಿಷ್ ಇಂಡಿಯಾದ ಅನುಕೂಲಕ್ಕಾಗಿ ದೆಹಲಿಯ ಹೃದಯ ಭಾಗ ಎನಿಸಿಕೊಂಡಿರುವ ರೈಸಿನಾ ಹಿಲ್ ಎಂಬಲ್ಲಿ ಸಂಸತ್ ಕಟ್ಟಡದ ನಿರ್ಮಾಣದ ಕೆಲಸಗಳಿಗೆ ಚಾಲನೆಯನ್ನು ನೀಡಲಾಯಿತು. * 1927ರಲ್ಲಿ ಭಾರತದ ಸಂಸತ್ ಭವನದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು, ಈ ಸಂಸತ್ ಭವನದ ಕಾಮಗಾರಿ 6 ವರ್ಷಗಳ ಸಮಯಕಾಶವನ್ನು ತಗೆದುಕೊಂಡಿತು.